You can access the distribution details by navigating to My Print Books(POD) > Distribution
Also Available As
₹ 50
₹ 50
ನಮ್ಮ ಜೀವನದಲ್ಲಿ ಅನೇಕ ಬಾರಿ ನಾವು ಈ ಜಾಗತಿಕ ಯುದ್ಧಗಳು (ವರ್ಲ್ಡ್ ವಾರ್ಸ್), ಮಹಾ ಯುದ್ಧಗಳು, ಅಥವಾ ವಿಶ್ವ ಮಹಾ ಯುದ್ಧಗಳು ಎಂಬ ಪದಗಳನ್ನು ಕೇಳಿಯೇ ಇರುತ್ತೇವೆ. ಹಾಗಾದರೆ ಯಾಕೆ ಈ ಯುದ್ಧಗಳನ್ನು ಜಾಗತಿಕ ಮಟ್ಟದಲ್ಲಿ ಪರಿಗಣಿಸಲಾಗಿದೆ? ನಿಮಗೆ ಗೊತ್ತಿರುವಂತೆ ಜಗತ್ತಿನ ಎಲ್ಲಾ ದೇಶಗಳು ಇದರಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲಾ ದೇಶಗಳ ಮೇಲೂ ಈ ಯುದ್ಧಗಳು ಪರಿಣಾಮ ಬೀರಿವೆ. ತಮ್ಮ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಯುದ್ದ ನಿರತವಾಗಿದ್ದ ಅದೆಷ್ಟೋ ರಾಷ್ಟ್ರಗಳು ಈ ಯುದ್ಧಗಳ ನಂತರ ತೆಪ್ಪಗಾದವು. ಮುಂದೆಂದೂ ಇಂತಹ ಘೋರವಾದ ಕದನಗಳು ನಡೆಯದಂತೆ ತಡೆಯಲು ವಿಶ್ವಸಂಸ್ಥೆಯು ಸ್ಥಾಪನೆಗೊಂಡಿತು; ಬಡ ರಾಷ್ಟ್ರಗಳ ಸ್ವಾತಂತ್ರ ಹೋರಾಟದಲ್ಲಿ ನೆರವಾಯಿತು. ಇನ್ನೂ ಅನೇಕ ಸಹಾಯಗಳನ್ನು ಇಂದಿಗೂ ಈ ವಿಶ್ವ ಸಂಸ್ಥೆಯು ಮಾಡುತ್ತಿದೆ.ಈ ಪುಸ್ತಕವನ್ನು ಬರೆಯಲು ನನಗೆ ಪ್ರೇರಣೆ ನೀಡಿದ್ದು ಫ್ರಾನ್ಸಿಸ್ ಎ. ಮಾರ್ಚ್ ಮತ್ತು ರಿಚರ್ಡ್ ಜೆ. ಬೀಮಿಷ್ ಎಂಬ ಲೇಖಕರು ಬರೆದ “ದಿ ಪ್ರಾಜೆಕ್ಟ್ ಗುಟೆನ್ ಬರ್ಗ್ ಇ – ಬುಕ್ ಆಫ್ ಹಿಸ್ಟರಿ ಆಫ್ ದಿ ವರ್ಲ್ಡ್ ವಾರ್” ಎಂಬ ಪುಸ್ತಕ(ebook). ಸುಮಾರು ಎಂಟು ನೂರು ಪುಟಗಳಿದ್ದ ಆ ದೊಡ್ಡ ಪುಸ್ತಕವನ್ನು ಅನುವಾದಿಸುವ ಬದಲು ಅದರಲ್ಲಿನ ಮುಖ್ಯ ಘಟನೆಗಳನ್ನು ಸರಳವಾಗಿ ಓದುಗರಿಗೆ ತಿಳಿಸುವ ಒಂದು ಪ್ರಯತ್ನ ಮಾಡಿದ್ದೇನೆ.
Currently there are no reviews available for this book.
Be the first one to write a review for the book ಮೊದಲನೇ ಮಹಾಯುದ್ಧ.