You can access the distribution details by navigating to My Print Books(POD) > Distribution
ಈ ಕವನ ಸಂಕಲನವು ಮೊದಲ ಪ್ರೀತಿಯಲ್ಲಿ ಆಗಬಹುದಾದ ಅನುಭವ ಮತ್ತು ಅದೇ ಪ್ರೀತಿಯಲ್ಲಿ ಮನಸ್ಸಿಗೆ ಆಗಬಹುದಾದ ನೋವಿನ ಬಗೆಗೆ ಬರೆದ ಕವನ ಸಂಕಲನವಿದು .
ಹೌದು ನೀವು ಅಂದುಕೊಳ್ಳಬಹುದು ನಾನು ಈ ಕವನ ಸಂಕಲನಕ್ಕೆ ಕಾಲ್ ಕೆ.ಜಿ. ಮೊಹಬ್ಬತ್ ಅಂತ ಯಾಕೆ?ಇದೇ ಹೆಸರನ್ನೆ ಇಟ್ಟಿರುವೆನೆಂಬ ಪ್ರಶ್ನೆಯೊಂದು ಕಾಡುತ್ತಾ ಇರುತ್ತೆ ನಿಮ್ಮನ್ನ. ಅದನ್ನು ನಾನು ಇಲ್ಲಿ ನಿಮ್ಗೆ ಬಗೆಹರಿಸುತ್ತೇನೆ, ಪ್ರತಿಯೊಬ್ಬರ ಬಾಳಲ್ಲಿ ಸಿಗದೆ ಹೋದ ಮೊದಲನೆಯ ಪ್ರೀತಿಯು, ಆರಂಭವಾಗಿ ಕೆಲ ತಿಂಗಳುಗಳಲ್ಲಿ ತನ್ನ ನೈಜ್ಯ ಸ್ವರೂಪವನ್ನು ತೋರಿಸುತ್ತೆ , ಹಾಗೆ ಆ ಪ್ರೀತಿಯು ಮನಸ್ಸಿನೊಂದಿಗೆ ತನ್ನ ಪ್ರಭಾವವನ್ನು ಎಷ್ಟರ ಮಟ್ಟಿಗೆ ಬೀರಿತ್ತು ಎನ್ನುವುದನ್ನ ಇಲ್ಲಿ ಹೇಳುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೆ. ಇದೇ ಕಾರಣಕ್ಕಾಗಿಯೆ ನಾನು ಈ ಕವನ ಸಂಕಲನಕ್ಕೆ ಕಾಲ್ ಕೆ.ಜಿ. ಮೊಹಬ್ಬತ್ ಅಂತಾ ಹೆಸರನಿಟ್ಟೆ.
ಇಲ್ಲಿ ಪ್ರೀತಿ ಎಂಬುದು ಬರೀ ಒಂದು ಆಕರ್ಷಣೆಯಲ್ಲ ಅದೂ ಮನುಷ್ಯನ ಮನಸ್ಸಿನೊಳಗಿನ ಭಾವನೆಗಳನ್ನು ಹೊರ ತರಬಲ್ಲ ಶಕ್ತಿಯ ಒಂದು ರೊಪವೆಂದರೆ ತಪ್ಪಲ್ಲ ಹಾಗು ಪ್ರೀತಿಯು ಸಿಗುವುದು ಅದೃಷ್ಟವಲ್ಲ ಆ ಪ್ರೀತಿಯು ಸಿಗದೆ ಇರುವುದೊಂದು ಅದೃಷ್ಟ ಎನ್ನುವುದು ನನ್ನ ಅನಿಸಿಕೆ ಅಷ್ಟೆ.ಇಲ್ಲಿ ಕವಿಯನ್ನು ಹುಡುಕಬೇಡಿ, ಭಾವನೆಗಳ ಬಿಸಿಯೊಂದಿಗೆ ಸಾಗೋ ಮನುಷ್ಯನ ಮನಸ್ಸಿನ ಏರಿಳಿತಗಳನ್ನು ಇಲ್ಲಿ ಕಾಣಿರಿ.
Currently there are no reviews available for this book.
Be the first one to write a review for the book ಕಾಲ್ ಕೆ.ಜಿ. ಮೊಹಬ್ಬತ್.