You can access the distribution details by navigating to My pre-printed books > Distribution
ಹವ್ಯಾಸಕ್ಕೆಂದು ಅನಿಸಿಕೆ, ಅನುಭವಗಳನ್ನು ಬ್ಲಾಗ್ ನಲ್ಲಿ ಬರೆಯುತ್ತಿದ್ದೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೆ. 'ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ' ಲೇಖನ ಪತ್ರಿಕೆ ಒಂದರಲ್ಲಿ ಪ್ರಕಟವಾದಾಗ ಆಶ್ಚರ್ಯ ಆಯಿತು. 'ಆಸ್ತಿ ಜಗಳಗಳ ಸುತ್ತ' ಲೇಖನ ಒಬ್ಬ ಸ್ನೇಹಿತ ತನ್ನ ಕುಟುಂಬದವರೊಡನೆ ಪ್ರಸ್ತಾಪಿಸಿದ್ದು ನನ್ನ ಗಮನಕ್ಕೆ ತಂದ. 'ಮುತ್ತು ರತ್ನ ಮಾರಿದ ನೆಲದ ಮಣ್ಣನ್ನೇ ಮಾರಿಕೊಳ್ಳುವ ದುರಾದೃಷ್ಟ' ಎನ್ನುವ ಲೇಖನಕ್ಕೆ ಬಂದ ಓದುಗರ ಮೆಚ್ಚುಗೆ, ಪ್ರತಿಕ್ರಿಯೆಗಳು ಪ್ರಾಮಾಣಿಕ ಅನಿಸಿದವು. 'ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ'’ ಎನ್ನುವ ಲೇಖನಕ್ಕೆ ಹಿರಿಯರು ಒಬ್ಬರು ನೀಡಿದ ಪ್ರತಿಕ್ರಿಯೆ, ಬರೆಯಲು ಮತ್ತು ಹಂಚಿಕೊಳ್ಳಲು ಪ್ರೋತ್ಸಾಹ ನೀಡಿತು. ಹಳೆಯ ಸ್ನೇಹಿತರು ಲೇಖನಗಳನ್ನು ಗಮನಿಸಿ ಮತ್ತೆ ಸ್ನೇಹವನ್ನು ಚಾಲ್ತಿಗೆ ತಂದರು. ಓದುವುದನ್ನು ಶಾಲೆ ಬಿಟ್ಟಾಗಲೇ ಬಿಟ್ಟಿದ್ದ ಒಬ್ಬ ಸ್ನೇಹಿತ ನನ್ನ ಲೇಖನ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದು ವಿಶೇಷ ಅನ್ನಿಸಿತು.
ಅಲ್ಲಿಂದ ಸ್ಪಷ್ಟತೆ ಮೂಡಿತು. ನಮ್ಮೂರು ನನ್ನೊಬ್ಬನ್ನದೆ ಅಲ್ಲ. ಹಾಗೆಯೆ ನನಗಾದ ಅನುಭವಗಳು, ಸಮಾನ ಮನಸ್ಕರಿಗೂ ಆಗಿ ಅವರಿಗೂ ಅದೇ ತರಹದ ಭಾವನೆಗಳು ಮೂಡಿರುತ್ತವೆ. ಹಂಚಿಕೊಂಡಾಗ ಮತ್ತೆ ನಮ್ಮ ಬಾಂಧವ್ಯ ಚಿಗುರುತ್ತದೆ. ಅಲ್ಲಿಂದ ಬರವಣಿಗೆ ನನ್ನ ಬದುಕಿನ ಒಂದು ಭಾಗವೇ ಆಗಿದೆ.
- ಆನಂದ ಮರಳದ
Currently there are no reviews available for this book.
Be the first one to write a review for the book ಕಾಲ ಕಲಿಸಿದ್ದು.