You can access the distribution details by navigating to My pre-printed books > Distribution
ವಿಚಿತ್ರ ಪ್ರಸಂಗ ! ವಿಧಿಯಿಲ್ಲದೆ ಲಕ್ಷಮ್ಮ ವೇಶ್ಯಾ ವೃತ್ತಿಗೆ ಇಳಿಯಬೇಕಾಯಿತು. ಒಬ್ಬೊಂಟಿಗ ಸೇಟ್ ಹೀರಾಲಾಲ್ ಅವಳಿಗೆ ಪೋಷಕನಾದ.
ಸಮಾಜದಲ್ಲಿ ನೀತಿ ಮತ್ತು ನ್ಯಾಯವನ್ನು ಕಾಯುವ ಗುರುತರ ಜವಾಬ್ದಾರಿಯನ್ನು ವಹಿಸಿರುವ ಪೋಲೀಸ್ ಕಾನ್ಸ್ ಟೇಬಲ್ ಕರಿಯಪ್ಪ ಸೂಳೆಗಾರಿಕೆಗೆ ಸಹಾಯಕನಾದ. ಅದು ಸಾಲದೆ, ತಪ್ಪಿಸಿಕೊಂಡ ಹುಡುಗಿ ರತ್ನಳನ್ನು ಲಕ್ಷಮ್ಮನ ಕೈಲಿ ಹಾಕಿ ಆ ಮನೆಯಲ್ಲಿ ಮತ್ತೊಂದು ಸಸಿಯನ್ನು ಬೆಳಸಲಾರಂಭಿಸಿದ. ವೇಶ್ಯೆಯ ಮಗಳು ಕಮಲ ತನ್ನ ತಾಯಿಯ ವೃತ್ತಿಯನ್ನು ಅವಲಂಬಿಸಲು ನಿರಾಕರಿಸಿದಳು. ಆದರೆ ಕುಲೀನ ಮತದಲ್ಲಿ ಜನಿಸಿದ್ದ ರತ್ನ ಆ ವೇಶ್ಯೆಯ ಅಚ್ಚು ಮೆಚ್ಚಿನ ಮಗಳಾಗಿ, ಶಿಷ್ಯಳಾಗಿ ಮುಂದುವರಿದಳು. ಆ ದೀಪಕ್ಕೆ ಮನಸೋತು ಊರಿನ ಅನೇಕ ಪತಂಗಗಳು ಬಂದು ಬಿದ್ದುವು. ಸಾಹುಕಾರರ ಮಗ ನಾಗರಾಜ ಅವಳ ಕೈಗೊಂಬೆಯಾಗಿ, ಕೊನೆಗೆ ಭಿಕಾರಿಯಾದ. ಸಭ್ಯ ಗೃಹಸ್ತನಾದ ಮಹೇಶ್ವರನೂ ಆಕೆಯ ಬುಟ್ಟಿಗೆ ಬಿದ್ದ ! ಅಬ್ಬ ! ಅವನಿಗೆ ಎಂಥ ಮೋಸವಾಯಿತು ! ಮಹೇಶ್ವರನ ಬಗ್ಗೆ ರತ್ನ ನಡಸಿದ ಒಂದೊಂದು ಕೆಲಸವನ್ನು ನೆನಸಿಕೊಂಡಾಗಲೂ ಮೈ ಜುಮ್ಮೆನ್ನುತ್ತದೆ ! ನಾಗರಾಜ ಹಾಳಾದ. ಆದರೆ ಮಹೇಶ್ವರ? ಅವನೂ ಸೋತನೆ? ರತ್ನ ಗೆದ್ದಳೆ? . . .
Currently there are no reviews available for this book.
Be the first one to write a review for the book ಹೆಣ್ಣಿನ ಕಣ್ಣು / Hennina Kannu.