You can access the distribution details by navigating to My pre-printed books > Distribution
ಸತ್ಯಕಥೆಗಳನ್ನಾದರಿಸಿ ಬೋರಿಸ್ ಪೊಲೆವಾಯ್ ರವರು ಬರೆದಿರುವ ಎ ಸ್ಟೋರಿ ಎಬೌಟ್ ಎ ರಿಯಲ್ ಮ್ಯಾನ್ (ನಿಜವಾದ ಮನುಷ್ಯನ ಕಥೆ) ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಯಾಸಿಸ್ಟ್ ಹಿಟ್ಲರನ ದಾಳಿಗೆ ಸಿಲುಕಿದ ಸೋವಿಯತ್ ಒಕ್ಕೂಟದ ಜನರ ಕಥೆ. ಜರ್ಮನ್ನರ ಆಕ್ರಮಣದಿಂದ ಅಪಾರ ಸಾವುನೋವು ಅನುಭವಿಸಿದರೂ, ತಮ್ಮ ಸಮಾಜವಾದಿ ದೇಶದ ಉಳಿವಿಗಾಗಿ ಜೀವವನ್ನೇ ಪಣವಿಟ್ಟು ಹೋರಾಡಿದ ಯೋಧ - ಯೋಧೆಯರ ಕಥೆಯಿದು. ದೇಶರಕ್ಷಣೆ ಮಾಡುತ್ತಾ ಸಾಮಾನ್ಯ ಜನರು ಅಸಾಮಾನ್ಯ ವ್ಯಕ್ತಿತ್ವ ಬೆಳೆಸಿಕೊಂಡ ಕಥೆಯಿದು. ಇದರ ನಾಯಕ ಅಲೆಕ್ಸಿ ಮೆರೆಸ್ಯೆವ್ ನಿಜವಾದ ಮನುಷ್ಯನಾಗುವ ಅಂದರೆ ಉದಾತ್ತ ವ್ಯಕ್ತಿತ್ನ ಬೆಳೆಸಿಕೊಳ್ಳುವ ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗುವ ವೀರಗಾಥೆ ಇದು. ಯುದ್ಧದ ನಂತರ ಅಲೆಕ್ಸಿ ಹೀಗೆ ಹೇಳುತ್ತಾರೆ - "ನಾವು ಎಲ್ಲಾ ದೇಶದ ಯುವ ಜನರು, ಯುದ್ಧದ ಕಷ್ಟಗಳನ್ನು ಎದುರಿಸಿದವರು, ಮತ್ತೆಂದೂ ಯುದ್ಧವಾಗದಂತೆ ಶಾಂತಿಗಾಗಿ ಹೋರಾಡಬೇಕಿದೆ, ಏಕೆಂದರೆ ಅದಕ್ಕಿಂತ ಉದಾತ್ತವಾದ ಕೆಲಸ ಮತ್ತೊಂದಿಲ್ಲ."
ಈ ಕೃತಿ ಯುದ್ಧ ಕಾಲದ ಕಥೆಯಾದರೂ ಯುದ್ಧವನ್ನು ವಿರೋಧಿಸುತ್ತದೆ. ಶಾಂತಿಪ್ರಿಯ ಜನತೆ ಒಗ್ಗೂಡಿದರೆ ಯುದ್ಧ ಪಿಪಾಸುಗಳೆಂದೂ ಸಹ ತಮ್ಮ ಯತ್ನದಲ್ಲಿ ಸಂಪೂರ್ಣ ಸಫಲರಾಗುವುದಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸುತ್ತದೆ.
Currently there are no reviews available for this book.
Be the first one to write a review for the book ನಿಜವಾದ ಮನುಷ್ಯನ ಕಥೆ.