You can access the distribution details by navigating to My pre-printed books > Distribution
ಜೀವಧಾರೆಯ ಬಗ್ಗೆ
ಈ ಕಥಾಸಂಕಲನದಲ್ಲಿ ಒಟ್ಟು 13 ಕಥೆಗಳಿವೆ. ಇವು ಸುಮಾರು ಮೂರು ದಶಕಗಳ ವ್ಯಾಪ್ತಿಯಲ್ಲಿ ಬರೆದ ಕಥೆಗಳಾದರೂ, ಇಂದಿನ ದಿನಗಳಿಗೆ ಕೂಡ ಬಹಳ ಪ್ರಸ್ತುತವೆನಿಸುವ ಕಥೆಗಳು. ನಿಜವಾದ ಘಟನೆಗಳಿಂದ ಪ್ರೇರಿತವಾಗಿ ಅದಕ್ಕೆ ತಮ್ಮದೇ ಆದ ಕಥಾ ಚೌಕಟ್ಟನ್ನು ಒದಗಿಸಿದ್ದಾರೆ. ಭಾಷೆ ಬಹಳ ಸರಳವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಕಥೆ ಹೇಳುವ ವಿಧಾನ ಓದುಗರಲ್ಲಿ ಕೊನೆಯವರೆಗೂ ಆಸಕ್ತಿಯನ್ನು ಮೂಡಿಸುತ್ತದೆ. ಓದುಗರನ್ನು ಕಥೆಯಲ್ಲಿ ತಲ್ಲೀನರಾಗುವಂತೆ ಮಾಡುವ ಅವರ ಕಲೆ ಮೆಚ್ಚತಕ್ಕದ್ದೆ.
ಇದರಲ್ಲಿ ಕೆಲವು ಗಂಭೀರ ಕಥೆಗಳಾದರೆ ಕೆಲವು ಹಾಸ್ಯ ಕಥೆಗಳೂ ಇವೆ. ಕೆಲವು ಕಥೆಗಳು ಹೆಣ್ಣುಮಕ್ಕಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತವೆ. ಅವರ ಬಗ್ಗೆ ಇರುವ ಹಳೆಯ ನಂಬಿಕೆ, ಮೌಢ್ಯಗಳನ್ನು ಪ್ರಶ್ನೆ ಮಾಡುತ್ತವೆ.
ಕೆಲವು ಕಥೆಗಳು ಕೋಮು ಸಾಮರಸ್ಯದ ಬಗ್ಗೆ, ಮನುಷ್ಯನಲ್ಲಿರಬೇಕಾದ ಮಾನವೀಯತೆ, ಆಶಾವಾದದ ಬಗ್ಗೆ ಮಾತನಾಡುತ್ತವೆ. ಒಟ್ಟಾರೆಯಾಗಿ, ಎಲ್ಲಾ ಕಥೆಗಳೂ ಸಹ ಬದುಕಿನ ಬಗ್ಗೆ ಆಶಾಭಾವವನ್ನು ಹುಟ್ಟಿಸುವುದರಿಂದ, ಪುಸ್ತಕಕ್ಕೆ ಇಟ್ಟ ಶೀರ್ಷಿಕೆ "ಜೀವಧಾರೆ" ಸೂಕ್ತವಾಗಿದೆ.
Currently there are no reviews available for this book.
Be the first one to write a review for the book ಜೀವಧಾರೆ.