You can access the distribution details by navigating to My pre-printed books > Distribution
ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗ. ಕೇವಲ ಎರಡು ಮೂರು ಸಾಲುಗಳಲ್ಲಿ ಕಥೆಯನ್ನು ಹೇಳುವ ಪ್ರಯತ್ನ ಇಂಗ್ಲಿಷ್ ಸಾಹಿತ್ಯದ ಪ್ರಭಾವ. ಒಂದು ಪುಟ್ಕಥೆಯನ್ನು ಒಂದು ನಿಮಿಷದಲ್ಲಿ ಓದಿ ಮುಗಿಸಬಹುದಾದ ಇವುಗಳು ಗಾತ್ರದಲ್ಲಷ್ಟೇ ಕಿರಿದು, ಆದರೆ ವಿಸ್ತಾರದಲ್ಲಿ ವಿಶಾಲವಾದವು. ಈ ಕಥೆಗಳ ಕಥಾವಸ್ತು - ಪ್ರತಿನಿತ್ಯದ ಆಗುಹೋಗುಗಳು ಮತ್ತು ಅದಕ್ಕೆ ಮನುಷ್ಯರು ಪ್ರತಿಕ್ರಿಯಿಸುವ ರೀತಿ.
ಪ್ರತಿಯೊಂದು ಕಥೆಯೂ ಒಂದು ದೃಶ್ಯವಾಗಿ ಮೂಡಿ, ಏನನ್ನೋ ಹೇಳಿ ಮುಂದೆ ಸಾಗುತ್ತದೆ. ಹಾಗೆಯೇ ಸಂದರ್ಭೋಚಿತವಾಗಿ ಸಮಾಜಕ್ಕೆ ಕೊಡುಗೆ ನೀಡಿದಂತಹವರ ನೆನಪು, ಯಾವುದೇ ವಿಶೇಷ ದಿನದ ಸಂದೇಶ ಅಥವಾ ವೈಶಿಷ್ಠ್ಯ ಕೂಡ ಇವುಗಳಲ್ಲಿ ಸಿಗುತ್ತವೆ. ಸಮಾಜದ ಮೇಲೆ ಪರಿಣಾಮ ಬೀರುವಂತಹ ಘಟನೆಗಳು, ಅಬ್ಬರದ ಪ್ರಚಾರಗಳು, ಈ ಕಥಾ ಕನ್ನಡಿಯಲ್ಲಿ ಮಿಂಚಿ ಹಾಗೇ ಓರೆನೋಟ ನಕ್ಕು ಮಾಯವಾಗುತ್ತವೆ. ಎಲ್ಲಾ ಕಥೆಗಳು ಸಕಾರಾತ್ಮಕ ಧೋರಣೆಯನ್ನು ತೋರಿಸುತ್ತದೆ.
'ಯಾರೋ ಎತ್ತಿ ಪದಕದಲ್ಲಿ ಜೋಡಿಸಿಕೊಳ್ಳುವವರೆಗೆ ಆ ಮುತ್ತು ಧೂಳಿನಲ್ಲಿ ಬಿದ್ದಿತ್ತು'- ಎಂಬ ಒಂದೇ ಸಾಲಿನ ಅತ್ಯಂತ ಅರ್ಥಗರ್ಭಿತ ಕಥೆಗಳಿವೆ. ಅವು ನಮ್ಮ ಮನಸ್ಸಿನ ಕದ ತಟ್ಟಿ ನಾವು ಬಾಗಿಲ ಬಳಿ ಹೋಗಿ ನಿಂತು ಯೋಚಿಸುವಂತೆ ಮಾಡುತ್ತವೆ. ಇಂದಿನ ವೇಗದ ಯುಗದಲ್ಲಿ ಸಹ ಓದುವುದನ್ನು ಸಂಪೂರ್ಣವಾಗಿ ಕೈಬಿಡದಂತೆ ಮಾಡಲು, ಗಹನವಾದ ವಿಚಾರವನ್ನು ಚಿಕ್ಕದಾಗಿ, ಚೊಕ್ಕದಾಗಿ ಹೇಳಹೊರಟಿರುವ ಈ ಪ್ರಯತ್ನ ನವೀನವಾದದ್ದು.
Currently there are no reviews available for this book.
Be the first one to write a review for the book ಪುಟ್ಕಥೆಗಳು - ೧.