You can access the distribution details by navigating to My pre-printed books > Distribution
This book ' ನಾನೇಕೆ ಒಬ್ಬ ಹಿಂದೂ' [ Why am I a Hindu - Udaylal Pai ] is a simple gateway to understanding the uncomplicated ways of otherwise seemingly complex Sanatana Dharma through conversations between the author and his friends or readers. The author explains the science, logic and rational of Sanatana Dharma in a very simple, lucid and reader-friendly style. The hardcore Vedic philosophy is made ridiculously simple for the beginners.This would be the best gift you can present to the younger generation to understand the science of Sanatana Dharma to begin with following which it can be practiced in daily life to avoid stress and lead a peaceful happy life.
Re: Naaneke obba Hindu - ನಾನೇಕೆ ಒಬ್ಬ ಹಿಂದೂ (eBook)
ವಿದ್ಯಾ ದತ್ತಾತ್ರಿ, ಬೆಂಗಳೂರು
ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಮತ್ತು ಇನ್ನು ಅನೇಕ ನಿರಂತರವಾಗಿ ನಮ್ಮ ಸಂಸ್ಕೃತಿ ಪರಂಪರೆ ಕುರಿತ ವಿಚಾರ ಗೋಷ್ಟಿಗಳನ್ನು ಅಟೆಂಡ್ ಮಾಡುವವರಿಗೆ ಪುಸ್ತಕದ ಕೆಲವಷ್ಟು ವಿಷಯಗಳು ಹೊಸತು ಎನ್ನಿಸದಿದ್ದರೂ ಉದಯ್ ಲಾಲ್ ಅವರ ಸರಳ ನಿರೂಪಣೆ ಪುಸ್ತಕದ ಆಕರ್ಷಣೆಯಾಗಿದೆ. ನನ್ನನ್ನೂ ಸೇರಿ ಅನೇಕರು Spiritual/ಅಧ್ಯಾತ್ಮ ಎಂದೊಡನೆ ನಮ್ಮ ತರ್ಕಕ್ಕೆ ನಿಲುಕದ್ದು ಇದು ಎಂದು ಅಲ್ಲಿಯೇ ಬಿಟ್ಟು ಮುಂದಿನ ಪೇಜ್ ತಿರುಗಿಸುವವರಾಗಿರುತ್ತಾರೆ. ಈ ಪುಸ್ತಕದಲ್ಲಿ ಎಲ್ಲೂ ದೊಡ್ಡ ದೊಡ್ಡ ಶಬ್ದಗಳು ಅಥವಾ ಇದು ನಮ್ಮಂತವರಿಗೆ ಅಲ್ಲ ಎಂಬ ಭಾವನೆ ಬರದಂತೆ ನೀವೂ ಸರಳವಾಗಿ ಅನುವಾದಿಸಿದ್ದೀರಿ.
ನಾನೂ ಹುಟ್ಟಿನಿಂದಲೇ ದೇವರ ಮೇಲಿನ ನಂಬಿಕೆ ಹೊತ್ತು ಬಂದವಳಲ್ಲ. ಅದಕ್ಕೆ ಪೂರಕವೆಂಬಂತೆ ಹೈಸ್ಕೂಲಿನಲ್ಲಿರುವಾಗ ಎ. ಎನ್. ಮೂರ್ತಿರಾಯರ ‘ದೇವರು’ ಪುಸ್ತಕ ಓದಿ ನನ್ನ ಹೈಸ್ಕೂಲ್ ಮತ್ತು ಕಾಲೆಜ್ ದಿನಗಳಲ್ಲಿ ನನ್ನ ಗೆಳತಿಯರೊಟ್ಟಿಗೆ ಮೊಂಡುವಾದ ಮಾಡುತ್ತಿದ್ದೆ. ಆಮೇಲೆ ನನ್ನ 20 ನೇ ವಯಸ್ಸಿನಲ್ಲಿ ಜೀವನದಲ್ಲಿ ಎದುರಾದ ಕೆಲವು ಘಟನೆಗಳಿಂದಾಗಿ ನನ್ನಮ್ಮನೊಂದಿಗೆ ದೇವರಿದ್ದಾನೆ ಎಂದು ಬಲವಾಗಿ ಬೇರೂರಿದ ದೇವರ ಮೇಲಿನ ನಂಬಿಕೆ ಇಂದಿನವರೆಗೂ ನನ್ನನ್ನು ಕಾಪಾಡಿದೆ.
ಧರ್ಮ ಮತ್ತು ಮತ ಇವೆರಡರ ವ್ಯತ್ಯಾಸವನ್ನು ಗುರುತಿಸಲು ಕಲಿತರೆ ಎಲ್ಲರೂ ನಾನೊಬ್ಬ ಹಿಂದೂ ಎಲ್ಲರೂ ಹೆಮ್ಮೆಯಿಂದ ಹೇಳಬಹುದು. ಹಿಂದೂ ಧರ್ಮವೆಂದರೆ ‘ನಂಬಿಕೆ ಹಾಗೂ ಸಂಪ್ರದಾಯಗಳ ನದಿ, ಅದು ಒಂದು ಮತವಲ್ಲ’ ಎಂಬ ಸರಳವಾದ ವ್ಯಾಖ್ಯಾನವನ್ನ ಪುಸ್ತಕದುದ್ದಕ್ಕೂ ಮನಮುಟ್ಟುವಂತೆ ಅಲ್ಲಲ್ಲಿ ವಿವರಿಸಿದ್ದು ಓದೋಕ್ಕೆ ತುಂಬಾ ಖುಷಿಯಾಯ್ತು.
ಪುಸ್ತಕದಲ್ಲಿ ನನಗೆ ತುಂಬಾ ಇಷ್ಟವಾದ chapters,
spiritual ಹಾಗೆಂದರೇನು?
ನಾನೊಬ್ಬ ಹಿಂದೂ !
ಮನುಷ್ಯ ದೇವರಿಗಿಂತ ಬಲಶಾಲಿಯೇ?
ಧರ್ಮ, ಮತ ಮತ್ತು ನನ್ನ ಮುಸ್ಲಿಂ ಮಿತ್ರ .
ಹಿಂದು ಧರ್ಮದಲ್ಲಿ ಮಾನವತಾವಾದ .
ಆಚರಣೆಗಳನ್ನೇಕೆ ಪ್ರಶ್ನಿಸಬೇಕು?
ನಿಮ್ಮ ಪುಸ್ತಕವನ್ನ ನೀವೇ ಪ್ರಕಟಿಸಿದ್ದಕ್ಕೆ ನಿಮಗೆ ಅಭಿನಂದನೆಗಳು .ಮತ್ತು ಉನ್ನತ ವಿಚಾರಗಳನ್ನ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಅನುವಾದಿಸಿ ಹೆಚ್ಚಿನ ಜನರನ್ನು ತಲುಪುವಂತೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು.
ಎ.ಎಸ್.ಫಣೀಂದ್ರ, ಮೈಸೂರು
ನಾನೊಬ್ಬ ಮಾಧ್ವ ಬ್ರಾಹ್ಮಣನಾಗಿ, ಶಾಸ್ತ್ರಪರಿಚಯವಿದ್ದು, ನನಗೆ ತಿಳಿದ ವಿಷಯಗಳನ್ನು ಅಭ್ಯಸಿಸಿ, ನನಗೆ ಖಚಿತವಾದ ನಂಬಿಕೆಗಳನ್ನು ಹೊಂದಿದ್ದೇನೆ. ಆದರೂ ಹಿಂದೂ ಸಂಪ್ರದಾಯಗಳ, ಆಚರಣೆಗಳ ಬಗ್ಗೆ ಇತರರು(ಹಿಂದೂ ಸ್ನೇಹಿತರೂ ಕೂಡ) ಪ್ರಶ್ನಿಸಿದಾಗ ನನಗೆ ತಿಳಿದ ವಿಷಯವನ್ನು ಅವರಿಗೆ ಸಮಂಜಸವಾಗಿ ಅರ್ಥೈಸಲು ಬಹಳ ಸಲ ಸೋತಿದ್ದೇನೆ. ಏಕೆಂದರೆ, ಕೇಳುಗರಿಗೆ ಸರಳವಾಗಿ ಅವರ ಇತಿಮಿತಿಯಲ್ಲೇ ಹೇಳಬೇಕು.
ಈ ನಿಟ್ಟಿನಲ್ಲಿ, ಈ ಗ್ರಂಥ, ಬಹಳ ಪರಿಣಾಮಕಾರಿಯಾಗಿದೆ. ಸರಳವಾಗಿ ಸನಾತನಧರ್ಮದ ಬಗ್ಗೆ, ಯಾರಾದರೂ ಪ್ರಶ್ನಿಸಬಹುದಾದ ವೈಚಿತ್ರ್ಯಗಳ ಬಗ್ಗೆ ವಿಭಿನ್ನವಾದ ದೃಷ್ಟಿಕೋನದಿಂದ ಯೋಚಿಸಿ ಅರ್ಥವಾಗುವಂತೆ ತಿಳಿಯಪಡಿಸುತ್ತದೆ.
"ನಾನೇಕೆ ಒಬ್ಬ ಹಿಂದೂ" ಎನ್ನುವುದನ್ನು ಅರಿಯಲು ಬಹಳ ಸಹಕಾರಿ.
ಇನ್ನು ನಿಮ್ಮ ಅನುವಾದ, ಹಿತವಾಗಿ, ನೀರಸ ತರ್ಜುಮೆಯಂತಿರದೆ ಬಹುತೇಕ ಸ್ವಂತ ಕೃತಿಯಂತೆ ಓದಿಸಿಕೊಂಡು ಹೋಗುತ್ತದೆ.
ನಾಗೇಂದ್ರ ಆರ್. ರಾವ್ , ಬೆಂಗಳೂರು
ನಿಮಗೆ ಅಭಿನಂದನೆಗಳು ಹಾಗೂ ಒಂದು ಉತ್ತಮ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
. ತುಂಬಾ ಕುತೂಹಲಕಾರಿ ಪುಸ್ತಕ. ಪುಸ್ತಕದಲ್ಲಿರುವ ಪ್ರಶ್ನೆಗಳನ್ನು ನಮಗೂ ಪದೇ ಪದೇ ಯಾರಾದ್ರೂ ಕೇಳ್ತಾನೆ ಇರ್ತಾರೆ .ಆದರೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಸೋಲ್ತಾ ಇದ್ವಿ. ಈಗ ಹಾಗಾಗಲ್ಲ, ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬಲ್ಲೆ. ಹಿಂದುತ್ವದ ಬಗ್ಗೆ ಹಿಂದೂ ಗಳಿಗೆ ಎಷ್ಟೊಂದು ಗೊಂದಲಗಳಿವೆ. ಈ ಪುಸ್ತಕ ಪ್ರತಿಯೊಬ್ಬರನ್ನು ತಲುಪಬೇಕು.