You can access the distribution details by navigating to My Print Books(POD) > Distribution
ವ್ಯೂಹ
ಇದೊಂದು ತಿರುವುಗಳಿಂದ ಕೂಡಿರುವ ಕಥೆ.
ನಾ ಬರೆದ ಮೊದಲ ಕತೆಯಿದಾಗಿದ್ದು, ಕನಸಿನ ಕೂಸು ಕೂಡ ಹೌದು. ಬರಿ ಕವಿತೆಗಳು ಬರೆಯುತ್ತಿದ್ದ ನನ್ನ ಮನದಲ್ಲಿ ಈ ಕತೆ ಜನ್ಮ ತಳೆದಿದ್ದೇ ಒಂದು ಸೋಜಿಗ.
ಈ ಕತೆಗೆ ಮುನ್ನುಡಿ ಬರೆದ ಸನ್ನಿವೇಶ ಇಂತಿದೆ "ನನ್ನ ಗೆಳೆಯನ ಪರಿಚಯಸ್ಥರೊಬ್ಬರು ಕಾಣೆಯಾಗುತ್ತಾರೆ. ಅವರು ಪ್ರೀತಿಸಿ ಮದುವೆಯಾಗಿ ಹಿಂದಿರುಗುತ್ತಾರೆ. ಆದರೆ ಆ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ನಾನು ಕೇಳ್ಪಟ್ಟ ಸಮಯದಲ್ಲೇ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆದ ಸುದ್ದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಯಿತು."
ಈ ಎರಡೂ ವಿಷಯಗಳು ನನ್ನ ಮನದಲ್ಲಿ ಅಚ್ಚಾಗಿ ಉಳಿಯಿತು...ಇದು ಒಂದೆರಡು ದಿನ ನಿದ್ದೆಗೆಡಿಸಿತ್ತು. ಇದನ್ನ ನನ್ನ ಬರವಣಿಗೆಗೆ ಹೇಗೆ ಉಪಯೋಗಿಸಬಹುದು ಎಂಬ ಸಣ್ಣ ಯೋಚನೆ ಮಿಂಚಂತೆ ಹೊಳೆಯಿತು.
ಅಲ್ಲಿಂದ ಕತೆ ಬರೆಯಲು ಆರಂಭಿಸಿದ್ದು.
"ಒಂದು ಮನೆಯ ಹೆಣ್ಣು ಮಗಳು ಕಾಣೆಯಾದಾಗ, ಆ ಮನೆಯ ತಳಮಳ, ಅವಳ ಸುತ್ತಮುತ್ತಲಿನವರ ಕಳವಳ ವ್ಯಕ್ತ ಪಡಿಸುವ ಒಂದು ಸಣ್ಣ ಪ್ರಯತ್ನ ಇದು.
ಕಾಣೆಯಾದ ಹೆಣ್ಣು ವ್ಯಭಿಚಾರದ ವ್ಯೂಹದಲ್ಲಿ ಸಿಕ್ಕಿದ್ದಾಳೆ ಎಂಬ ಅನುಮಾನ ಬಂದ ಕೂಡಲೇ, ಪೊಲೀಸ್, ಕೋರ್ಟ್ ಎಂಬ ತಾಪತ್ರಯದ ಬಗ್ಗೆ, ಹೆಣ್ಣಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ತನ್ನ ಬುದ್ಧಿಶಕ್ತಿಯಿಂದ ಹೇಗೆ ಪಾರು ಮಾಡಲು ಯೋಜನೆ ಹೂಡಬಹುದೆಂಬ ಕಲ್ಪನೆ ಇದು.
ಈ ಬುದ್ಧಿವಂತಿಕೆಯೊಂದಿಗೆ, ಲಾ & ಆರ್ಡರ್, ರಾಜಕೀಯ ಬಲವಿದ್ದರೆ ಹೇಗೆ? ಎಂದು ಯೋಚಿಸಿದೆ.
ಕಾರಣ ಇಷ್ಟೇ ... ನಾವು ಅದೆಷ್ಟೋ ಕತೆಗಳಲ್ಲಿ, ನಾಟಕದಲ್ಲಿ, ಸಿನಿಮಾದಲ್ಲಿ ಈ ಲಾ & ಆರ್ಡರ್, ಹಾಗೂ ರಾಜಕೀಯ ಶಕ್ತಿ...
Vyuha as I read :
I never expected this is gonna be such a suspense thriller. The novel is full of twist and turns. I would say something happens always out...
Re: VYUHA - THE MYSTERY REVEALS. by Janardhan
ವ್ಯೂಹ ಒಂದು ಅನಿಶ್ಚಿತತೆಯ ತಿರುವುಗಳಿಂದ ಕೂಡಿರುವ ಕಾದಂಬರಿಯಾದರೂ ವೇಶ್ಯಾವಾಟಿಕೆಯ ಕ್ರೂರತೆಯಲ್ಲಿ ಸಿಲುಕಿರುವ ಹೆಣ್ಣು ಮಕ್ಕಳ ಮಾನಸಿಕ ಸ್ಥಿತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಥೆಯಲ್ಲಿ ಬರುವ ಸಾಕಷ್ಟು ಪಾತ್ರಗಳು ಓದುಗರಿಗೆ ಗೊಂದಲವೆನಿಸಿದರೂ, ಪ್ರತಿ ಪಾತ್ರದ ಪ್ರಾಮುಖ್ಯತೆಯನ್ನು ಬಿಂಬಿಸುವಲ್ಲಿ ಲೇಖಕರ ಪಾತ್ರ ಗಮನಾರ್ಹ.
ಈ ಕಾದಂಬರಿಯು ಕೇವಲ...