You can access the distribution details by navigating to My Print Books(POD) > Distribution
ಪಶ್ಚಿಮ ಕರಾವಳಿಯಲ್ಲಿ ಕಳುವಾದ ಜಲಾಂತರ್ಗಾಮಿ ಸಬ್-ಮೆರೀನ್ ನೌಕೆಯ ಶೋಧಕ್ಕೆಂದು ನೇವಿ ಏಜೆಂಟ್ ಕ್ಯಾಪ್ಟನ್ ಸಾತ್ವಿಕ್ ಅರಸ್, ಕಪಟ ನಾಟಕವಾಡಿ ಕಾರವಾರ ಬಳಿ ಗೋವಾ ಗಡಿಯಲ್ಲಿರುವ ತೈಲ ಬಾವಿ ರಿಗ್ ಒಡೆಯ ಕಮಾಡೋರ್ ನಾಯಕ್‍ರವರ ಮನೆ ಸೇರುತ್ತಾನೆ.
ಅವರ ಮನೆಯಲ್ಲಿ ಸಂದೇಹಾಸ್ಪದ ವ್ಯಕ್ತಿಗಳ ಕೂಟವೊಂದು ಯಾವುದೋ ದೇಶದ್ರೋಹಿ ಅಂತರರಾಷ್ಟ್ರೀಯ ಷಡ್ಯಂತ್ರ ರಚಿಸಿ ಸಾಗರದಡಿಯ ನಿಧಿ ಕಳ್ಳ ಶೋಧನೆಗಾಗಿ ಸಾತ್ವಿಕ್‌ನನ್ನು ಒಪ್ಪಿಸುತ್ತಾರೆ..ಆದರೆ ಸಾತ್ವಿಕ್ ಅಂತಾ ಮುಗ್ದನೇನಲ್ಲ..
ಅವರ ರಹಸ್ಯ ನಿಧಿ ಯಾವುದು , ಯಾರದ್ದು ಎಂದು ಪತ್ತೆ ಹಚ್ಚಲೆಂದೇ ಅವರ ಜತೆಗೆ ಸಹಕರಿಸುವ ನಾಟಕವಾಡುತ್ತಾ ಎಲ್ಲವನ್ನೂ ಪತ್ತೆ ಮಾಡಲು ಹೊರಡುತ್ತಾನೆ..
ತಮ್ಮ ಮನೆಯಲ್ಲೇ ಕಮಾಡೋರ್ ನಾಯಕ್ ಮತ್ತು ಅವರ ದಿಟ್ಟ ಪುತ್ರಿ ಸುಮನಾ ಏಕೆ ದಿಗ್ಬಂಧನದಲ್ಲಿದ್ದಾರೆ?...ಅವನ ಸಹಾಯ ಮಾಡಲು ಬಂದ ಹಮಿದ್ ಅಲಿ ಯಾರು, ಅವನಿಗೇನಾಯಿತು?..
.
ಸಾತ್ವಿಕ್‌ನ ಶೋಧನೆಯ ಹಾದಿ ಸುಗಮವೇನಲ್ಲ, ಹಲವು ಅಪಾಯಗಳು, ಶತ್ರುಗಳು ಅವನ ದಾರಿಯಲ್ಲಿ ಸವಾಲು ಒಡ್ಡುತ್ತಾರೆ.. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ, ಅಂಡರ್-ವಾಟರ್ (ನೀರಿನಡಿ) ಸಾಹಸಗಳನ್ನೊಳಗೊಂಡ, ಕೊನೆಯ ಪುಟದವರೆಗೂ ಸಸ್ಪೆನ್ಸ್ ಕಾದಿರಿಸಿಕೊಳ್ಳುವಂತಾ ಕತೆ ,
Currently there are no reviews available for this book.
Be the first one to write a review for the book Suvarna Karavali.