ನೆಚ್ಚಿನ ಓದುಗರೇ,ಈ ನನ್ನ ಚೊಚ್ಚಲ ಬರಹದ ಸಂಗ್ರಹ ಎಷ್ಟೋ ವರುಷಗಳ ಕೂಡಿಟ್ಟ ಗಂಟು. ಗಂಟನ್ನು ನೋಡಿದಾಗಲೆಲ್ಲಾ, ಅಯ್ಯೋ ಯಾವಾಗ ಇವುಗಳಿಗೆ ಒಂದು ಮೋಕ್ಷ ತೋರಿಸಿ, ಪುಸ್ತಕವಾಗಿ ಬಿಡುಗಡೆ ಮಾಡುವುದು ಎಂದು ಲೆಕ್ಕ ಹಾಕುತ್ತಿದ್ದೆ. ನನ್ನ ಕೆಲಸದ ನಿವೃತ್ತಿ ಹುರಿದುಂಬಿಸಿತು, ಬರೆಯಲು ಶುರು ಮಾಡಿಯೇ ಬಿಟ್ಟೆ. ನನ್ನದು ಸ್ವಲ್ಪ ಸೂಕ್ಷ್ಮ ಸ್ವಭಾವ, ಎಂದರೆ ಯಾವುದಾದರೂ ಹೃದಯ ಸ್ಪರ್ಶಿ ದೃಶ್ಯವನ್ನೋ ಅಥವಾ ವೆಕ್ತಿಯನ್ನೋ ಅಥವಾ ಘಟನೆಯನ್ನೂ ನೋಡಿದರೆ, ನನ್ನ ಮನಸ್ಸಿನಲ್ಲಿ ನನ್ನದೇ ಆದ ಒಂದು ಕಲ್ಪನಾ ಸುರುಳಿಮೂಡಿ , ಚಿತ್ರಗಳು ಪರದೆಯ ಮೇಲೆ ನೋಡಿದಂತೆ ಬರುತ್ತದೆ. ಈ ಮನದಾಳದ ಉಹಾ ಕಥೆಯನ್ನು ತತ್ ಕ್ಷಣ, ನಾನು ಎಲ್ಲಿದ್ದರೂ ಸಹ, ಸಿಕ್ಕ ಸಣ್ಣ ಕಾಗದದ ಮೇಲೋ ಅಥವಾ ಪಾಕೆಟ್ ಡೈರಿಯಲ್ಲೋ ಸಂಕ್ಷೇಪವಾಗಿ ಬರೆದು ಇಡುತ್ತಾ ಬಂದೆ. ಇದೇ ನಾ ಮೇಲೆ ಹೇಳಿರುವ ಗಂಟಾಯಿತು. ನಾನು ಈ ಹಿಂದೆ ಕಥೆ ಬರೆದವನಲ್ಲ, ಹೀಗಾಗಿ ಇಲ್ಲಿ ನನ್ನದೇ ಆದ ಬರೆಯುವ ಶೈಲಿ ನೀವುಗಳು ಮನಗಾಣುತ್ತೀರಿ. ನನ್ನ ಈ ಬರಹಗಳು ಬಿಡಿ ಬಿಡಿಯಾಗಿದ್ದವು. ಈ ಕಥೆಗಳನ್ನು ಒಂದು ಪುಸ್ತಕವಾಗಿ ಪರಿವರ್ತಿಸಲು ಪ್ರೇರಣೆ ಯಾಗಿದ್ದು " ಪ್ರೇರಣಾ ರಿಸೋರ್ಸ್ ಸೆಂಟರ್ ನ ಸಂಸ್ಥಾಪಕರಾದ ಶ್ರೀಮತಿ ಪ್ರಶಾನ್ತ ಜೋಯಿಸ್. ಇವರ ಪರಿಚಯವಾಗಿದ್ದು ಒಂದು ಸೌಭಾಗ್ಯ. ಒಬ್ಬ ಸಾಮಾನ್ಯ ಮಹಿಳೆಯಾಗಿ, ಅಸಾಮಾನ್ಯ ಸಾಧನೆ ಮಾಡಿದ್ದಾರೆ, ಶೋಷಿತವರ್ಗಕ್ಕೆ ಬೆನ್ನೆಲಬಾಗಿದ್ದರೆ. ಈ ಕಿರು ಪುಸ್ತಕದ ಬೆಲೆ ಕಟ್ಟಿಲ್ಲ, ಏಕೆಂದರೆ, ಮೇಲೆ ಹೇಳಿದ ಸಂಸ್ಥೆಯ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಈ ಸಂಸ್ಥೆ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮುಂದುವರೆಯಲು ನಿಮ್ಮ ಸಹಾಯ ಅತ್ಯಗತ್ಯ. ಅದಕ್ಕಾಗಿ, ನಿಮ್ಮ ಕೈ ಮೀರಿ ಧನ ಸಹಾಯ ಮಾಡಿರಿ ಎಂದು ಸಂಸ್ಥೆಯ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಈ ಪುಸ್ತಕ ಪೂರ್ಣ ರೂಪಕ್ಕೆ ಬರಲು ನನ್ನ ಹಿತೈಷಿ ಮತ್ತು ಸ್ನೇಹಿತರಾದ ಶ್ರೀ ರಮೇಶ್ ರಾವ್ ರವರ ತಿದ್ದುಪಡಿ, ಸೂಕ್ತ ಸಲಹೆಗಳು ಬಹಳ ಅವಶ್ಯವಾಗಿದ್ದವು. ಇದರ ಜೊತೆಗೆ, ನನ್ನ ಧರ್ಮಪತ್ನಿ ಶ್ರೀಮತಿ ಪದ್ಮ ಶ್ರೀನಿವಾಸ್ ರವರ ಪ್ರೋತ್ಸಾಹ ಹಾಗು ಸಹಕಾರ ಅಪಾರ. ಈ "ಮನದಾಳದಿಂದ" ಪುಸ್ತಕವನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ತರಲು ಕಲ್ಪನೆ ಮಾಡಿ ಪ್ರೋತ್ಸಾಹಿಸಿದ ನಮ್ಮ ಮಗ ಚಿ ಶಶಾಂಕನಿಗೆ ಧನ್ಯವಾದಗಳು. ನನ್ನ ಬರಹದ ಎಲ್ಲಾ ತಪ್ಪುಗಳನ್ನು ಮನ್ನಿಸಿ, ನೀವು ಪ್ರೋತ್ಸಾಯಿಸುತ್ತಿರೀ ಎಂದು ನಂಬಿದ್ದೇನೆ.ಈಗ ಇದು ನಿಮ್ಮ ಕೈಯ್ಯಲ್ಲಿದೆ.ನಿಮ್ಮ ಅನಿಸಿಕೆ, ಟೀಕೆ ಗಳು ನನಗೆ ಆಶೀರ್ವಾದವಾಗಿ ತಲುಪಲಿ.
Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD.
Payment Option FAQs.