You can access the distribution details by navigating to My pre-printed books > Distribution
"ಕನ್ನಡದ ಒಗಟುಗಳು" ಹೊಸ ರೀತಿಯ ಕೃತಿಯಾಗಿದೆ. ವಿಜಯಲಕ್ಷ್ಮಿಯವರು ತುಂಬ ಅದ್ಭುತವಾದ ಒಗಟುಗಳ ಸ್ವರೂಪವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಇವು ಮೂಮೂಲಿ ಜನಪ್ರಿಯ ಒಗಟುಗಳಾಗಿರದೆ ಸ್ವತಂತ್ರವಾಗಿ ಸಾಹಿತ್ಯಾತ್ಮಕವಾಗಿ ರಚಿಸಿದವುಗಳಾಗಿರುವುದು ಗಮನಾರ್ಹ. ಅವರು ಷಟ್ಪದಿಯ ಶೈಲಿಯಲ್ಲಿ ಒಗಟುಗಳನ್ನು ರಚಿಸಿದ್ದಾರೆ. ಶಾಲಾ ಮಕ್ಕಳಿಗಂತೂ ಹಾಡಲು ಒಗ್ಗುವ ಪದ್ಯವಾಗಿ, ಅರ್ಥ ಹುಡುಕುವ Puzzle ಆಗಿ ಒಂದೇ ಗುಕ್ಕಿನಲ್ಲಿ flash ಆದಾಗ ಕುಣಿದು ಕುಪ್ಪಳಿಸಿ ಬಿಡುವ sharpness, ಒಗಟು ಬಿಡಿಸಿ ಅರ್ಥ ಹೇಳಿದಾಗ ಅರ್ಥ ಅಥವಾ ಉತ್ತರದ ಚುಂಗು ಹಿಡಿದು ಹೊರಟಾಗ ರೆಕ್ಕೆ ಏರಿ ಆಕಾಶಕ್ಕೆ ಹಾರಿದಂತಹ ಅನುಭವವಾಗುತ್ತದೆ. ಇದರಲ್ಲಿ 200 ಒಗಟುಗಳಿದ್ದು, ನಮ್ಮ ಮನಸ್ಸಿಗೆ ಸವಾಲನ್ನು ಒಡ್ಡುತ್ತವೆ. ಕೆಲವು ತಕ್ಷಣ ಹೊಳೆದರೆ, ಇನ್ನೂ ಕೆಲವು ಸ್ವಲ್ಪ ಸತಾಯಿಸುತ್ತವೆ. ಆದರೆ ಒಟ್ಟಿನಲ್ಲಿ ಓದುಗರಿಗೆ ಮುದ ನೀಡುತ್ತವೆ. ಇದು ಒಮ್ಮೆ ಓದಿ ಪಕ್ಕಕ್ಕೆ ಎತ್ತಿಡುವಂತಹ ಕೃತಿಯಲ್ಲ, ಬದಲಿಗೆ ಸ್ವಲ್ಪಸ್ವಲ್ಪವೇ ಓದುತ್ತಾ ಆಸ್ವಾದಿಸುವಂತಹ ಕೃತಿಯಾಗಿದೆ.
Currently there are no reviews available for this book.
Be the first one to write a review for the book ಕನ್ನಡ ಒಗಟುಗಳು.