You can access the distribution details by navigating to My pre-printed books > Distribution

Add a Review

ಕನ್ನಡ ಒಗಟುಗಳು (eBook)

Type: e-book
Genre: Entertainment
Language: Kannada
Price: ₹0
Available Formats: PDF

Description

"ಕನ್ನಡದ ಒಗಟುಗಳು" ಹೊಸ ರೀತಿಯ ಕೃತಿಯಾಗಿದೆ. ವಿಜಯಲಕ್ಷ್ಮಿಯವರು ತುಂಬ ಅದ್ಭುತವಾದ ಒಗಟುಗಳ ಸ್ವರೂಪವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಇವು ಮೂಮೂಲಿ ಜನಪ್ರಿಯ ಒಗಟುಗಳಾಗಿರದೆ ಸ್ವತಂತ್ರವಾಗಿ ಸಾಹಿತ್ಯಾತ್ಮಕವಾಗಿ ರಚಿಸಿದವುಗಳಾಗಿರುವುದು ಗಮನಾರ್ಹ. ಅವರು ಷಟ್ಪದಿಯ ಶೈಲಿಯಲ್ಲಿ ಒಗಟುಗಳನ್ನು ರಚಿಸಿದ್ದಾರೆ. ಶಾಲಾ ಮಕ್ಕಳಿಗಂತೂ ಹಾಡಲು ಒಗ್ಗುವ ಪದ್ಯವಾಗಿ, ಅರ್ಥ ಹುಡುಕುವ Puzzle ಆಗಿ ಒಂದೇ ಗುಕ್ಕಿನಲ್ಲಿ flash ಆದಾಗ ಕುಣಿದು ಕುಪ್ಪಳಿಸಿ ಬಿಡುವ sharpness, ಒಗಟು ಬಿಡಿಸಿ ಅರ್ಥ ಹೇಳಿದಾಗ ಅರ್ಥ ಅಥವಾ ಉತ್ತರದ ಚುಂಗು ಹಿಡಿದು ಹೊರಟಾಗ ರೆಕ್ಕೆ ಏರಿ ಆಕಾಶಕ್ಕೆ ಹಾರಿದಂತಹ ಅನುಭವವಾಗುತ್ತದೆ. ಇದರಲ್ಲಿ 200 ಒಗಟುಗಳಿದ್ದು, ನಮ್ಮ ಮನಸ್ಸಿಗೆ ಸವಾಲನ್ನು ಒಡ್ಡುತ್ತವೆ. ಕೆಲವು ತಕ್ಷಣ ಹೊಳೆದರೆ, ಇನ್ನೂ ಕೆಲವು ಸ್ವಲ್ಪ ಸತಾಯಿಸುತ್ತವೆ. ಆದರೆ ಒಟ್ಟಿನಲ್ಲಿ ಓದುಗರಿಗೆ ಮುದ ನೀಡುತ್ತವೆ. ಇದು ಒಮ್ಮೆ ಓದಿ ಪಕ್ಕಕ್ಕೆ ಎತ್ತಿಡುವಂತಹ ಕೃತಿಯಲ್ಲ, ಬದಲಿಗೆ ಸ್ವಲ್ಪಸ್ವಲ್ಪವೇ ಓದುತ್ತಾ ಆಸ್ವಾದಿಸುವಂತಹ ಕೃತಿಯಾಗಿದೆ.

About the Author

ಕೊಳ್ಳೇಗಾಲದ ನಿವಾಸಿಯಾಗಿರುವ ವಿಜಯಲಕ್ಷ್ಮಿ ಎಂ ಎಸ್ ರವರು ಪ್ರೌಢಶಾಲಾ ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ಆಸಕ್ತರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಎಂ ಎ ಪದವಿ ಪಡೆದಿದ್ದಾರೆ. ಕೊಳ್ಳೇಗಾಲದಲ್ಲಿ ಮಹಿಳೆಯರಿಗಾಗಿನ "ಮುಕ್ತ ಸಾಹಿತ್ಯ ವೇದಿಕೆ"ಯ ಆರಂಭಕರ್ತೆಯರಲ್ಲಿ ಒಬ್ಬರಾದ ಅವರಿಗೆ ಓದುವುದು, ಹಾಡುವುದು, ಲೇಖನ, ಕಥೆ, ಪುಟಾಣಿ ಕಥೆ, ಕವನ ಬರೆಯುವ ಹವ್ಯಾಸವಿದೆ. "ಬಳಪಮ್ಯಾಗಜೈನ್.ಬ್ಲಾಗ್ಸ್ಪಾಟ್.ಕಾಮ್" ನಲ್ಲಿ ಈಗಾಗಲೇ ಬಹಳಷ್ಟು ಲೇಖನಗಳು, ಕವಿತೆಗಳು ಪ್ರಕಟವಾಗಿವೆ. ಪುಟಾಣಿ ಕಥೆಗಳ ಸಂಗ್ರಹವಾದ ‘ಸುವಿದನಿ’ ಹಾಗೂ ಕವನ ಸಂಕಲನವಾದ ‘ಲಹರಿ’ ಪ್ರಕಟವಾಗಿದೆ. ಈಗ ಇವರು ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಆಸಕ್ತಿ ಮೂಡಿಸಲು, ಹೊಸ ಶೈಲಿಯ ‘ಕನ್ನಡ ಒಗಟುಗಳು’ ಕೃತಿ ಬರೆದಿದ್ದಾರೆ. ಇದು ಪ್ರಕಟಗೊಳ್ಳುತ್ತಿರುವ ಅವರ ಮೂರನೆಯ ಕೃತಿಯಾಗಿದೆ.

Book Details

Publisher: Nileena Thomas
Number of Pages: 64
Availability: Available for Download (e-book)

Ratings & Reviews

ಕನ್ನಡ ಒಗಟುಗಳು

ಕನ್ನಡ ಒಗಟುಗಳು

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಕನ್ನಡ ಒಗಟುಗಳು.

Other Books in Entertainment

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.