You can access the distribution details by navigating to My pre-printed books > Distribution
ಸರಳತೆಯ ಸತ್ವದ ಗೀತಗಳು..
ಲಾವಣಿ ಎನ್ನುವುದು ಅತ್ಯಂತ ಹಳೆಯ ಜನಪ್ರಿಯ ಪ್ರಕಾರಗಳಲ್ಲೊಂದು.ಉತ್ಸಾಹದಾಯಕವಾದ,ಕಥಾತ್ಮಕ ಭಾಗವನ್ನು ಕುರಿತು ಹೇಳುವ 'ಹಾಡ್ಗತೆ'.ಸರಳತೆಯಲ್ಲಿಯೇ ಸತ್ವ ಕಾಣಿಸುವ ಲಾವಣಿಗಳು ಒಂದೇ ಘಟನೆಯ,ವ್ಯಕ್ತಿಯ ಮೇಲೆ ನಿಲ್ಲುವ ಕಥನಗೀತೆಯೂ ಹೌದು.
ಪ್ರಸ್ತುತದಲ್ಲಿ ಧೀರ್ಘಕಾವ್ಯ,ಖಂಡಕಾವ್ಯ,ದ್ವಿಪದಿಗಳಂತಹ ಸಾಲುಗಳೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತವೆ.ಇಂತಹ ಹೊತ್ತಿನಲ್ಲಿ ಕವಯಿತ್ರಿ ಎಂ.ಎಸ್.ವಿಜಯಲಕ್ಷ್ಮಿ ಶ್ರದ್ಧೆಯಿಂದ ರಚಿಸಿದ ಲಾವಣಿಗಳ ಸಂಕಲನವನ್ನೇ ಹೊರತರುತ್ತಿರುವುದು ಅಭಿನಂದನಾರ್ಹ ಸಂಗತಿ.
ಹದಿನೆಂಟು ಲಾವಣಿಗಳಿರುವ ಈ ಸಂಕಲನದಲ್ಲಿ 'ಕರ್ನಾಟಕದ ಇತಿಹಾಸ' ದಿಂದ ಶುರುವಾಗುವ ಲಾವಣಿಗಳಲ್ಲಿ ಸಂವಿಧಾನ,ಸ್ವಾತಂತ್ರ್ಯ ಗಾಥೆ,ಭಗತ್ ಸಿಂಗ್,ಸಾವಿತ್ರಿಬಾಯಿ ಪುಲೆ ಯರ ಜೊತೆಗೆ ಮಹಿಳಾ ಸಾಧಕಿಯರ ಬದುಕೂ ಕಥನ ಗೀತಗಳಾಗಿವೆ.ಮಹಾದೇವಿಯಕ್ಕ ನಡೆದ ದಾರಿಯಿದೆ,ಮತದಾನದ ಅರಿವೂ ಇದೆ.ಗೆಳೆತನದ ಸಾರವೂ ಇದೆ. ಎಷ್ಟೆಲ್ಲ ಪಾಠ ಹೇಳಿದ ' ಕರೋನಾ' ದ ಚಿತ್ರಣವೂ..
ಅಷ್ಟೇ ಏಕೆ ವ್ಯಾಕರಣ,ಸಂಧಿಗಳಂತಹವೂ ಇಲ್ಲಿ ಹಾಡ್ಗತೆಗಳಾಗಿ ಸೆಳೆಯುತ್ತವೆ.
ಮಹಿಳಾಕ್ಷೇತ್ರದ ಕುರಿತು ಅದಮ್ಯವಾಗಿ ತುಡಿಯುವ ಡಾ.ಜಿ.ಸುಧಾ ಅವರ ಜೊತೆ ವಿಜಯಲಕ್ಷ್ಮಿ ಯವರೂ ಸೇರಿ ರಚಿಸಿರುವ ಮಹಿಳಾ ಸಾಧನೆಯ ಇತಿಹಾಸ ಲಾವಣಿ ಅಪರೂಪದ ಮತ್ತು ಅಗತ್ಯ ಮಾಹಿತಿಗಳನ್ನು ಒಳಗೊಂಡಿದೆ.
ಯಾವುದೇ ಪಾಂಡಿತ್ಯ ಹೇರಿಕೊಳ್ಳದ ಈ ಸರಳ ರಚನೆಗಳು ಎಲ್ಲರಿಗೂ ತಲುಪಬಲ್ಲವೆಂಬುದೇ ಇವುಗಳ ಹೆಗ್ಗಳಿಕೆ.ಶಾಲಾ ಕಾಲೇಜು ವಿದ್ಯಾರ್ಥಿಗಳಿಗಳ ಬಳಿ ಇರಲೇಬೇಕಾದ ಕೃತಿಯೂ ಹೌದು.ಹಾಡುವ ಉತ್ಸಾಹದ ಜತೆಗೆ ಅರಿವನ್ನು ಹಿಗ್ಗಿಸುವ ಶಕ್ತಿ ಈ ಲಾವಣಿಗಳಿಗಿದೆ.
Currently there are no reviews available for this book.
Be the first one to write a review for the book ಲಾವಣಿ.