You can access the distribution details by navigating to My pre-printed books > Distribution

Add a Review

ಲಾವಣಿ (eBook)

ಹೊಸಗನ್ನಡದ ಲಾವಣಿಗಳು
Type: e-book
Genre: Poetry, Education & Language
Language: Kannada
Price: ₹0
Available Formats: PDF

Description

ಸರಳತೆಯ ಸತ್ವದ ಗೀತಗಳು..

ಲಾವಣಿ ಎನ್ನುವುದು ಅತ್ಯಂತ ಹಳೆಯ ಜನಪ್ರಿಯ ಪ್ರಕಾರಗಳಲ್ಲೊಂದು.ಉತ್ಸಾಹದಾಯಕವಾದ,ಕಥಾತ್ಮಕ ಭಾಗವನ್ನು ಕುರಿತು ಹೇಳುವ 'ಹಾಡ್ಗತೆ'.ಸರಳತೆಯಲ್ಲಿಯೇ ಸತ್ವ ಕಾಣಿಸುವ ಲಾವಣಿಗಳು ಒಂದೇ ಘಟನೆಯ,ವ್ಯಕ್ತಿಯ ಮೇಲೆ ನಿಲ್ಲುವ ಕಥನಗೀತೆಯೂ ಹೌದು.
ಪ್ರಸ್ತುತದಲ್ಲಿ ಧೀರ್ಘಕಾವ್ಯ,ಖಂಡಕಾವ್ಯ,ದ್ವಿಪದಿಗಳಂತಹ ಸಾಲುಗಳೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತವೆ.ಇಂತಹ ಹೊತ್ತಿನಲ್ಲಿ ಕವಯಿತ್ರಿ ಎಂ‌.ಎಸ್.ವಿಜಯಲಕ್ಷ್ಮಿ ಶ್ರದ್ಧೆಯಿಂದ ರಚಿಸಿದ ಲಾವಣಿಗಳ ಸಂಕಲನವನ್ನೇ ಹೊರತರುತ್ತಿರುವುದು ಅಭಿನಂದನಾರ್ಹ ಸಂಗತಿ.
ಹದಿನೆಂಟು ಲಾವಣಿಗಳಿರುವ ಈ ಸಂಕಲನದಲ್ಲಿ 'ಕರ್ನಾಟಕದ ಇತಿಹಾಸ' ದಿಂದ ಶುರುವಾಗುವ ಲಾವಣಿಗಳಲ್ಲಿ ಸಂವಿಧಾನ,ಸ್ವಾತಂತ್ರ್ಯ ಗಾಥೆ,ಭಗತ್ ಸಿಂಗ್,ಸಾವಿತ್ರಿಬಾಯಿ ಪುಲೆ ಯರ ಜೊತೆಗೆ ಮಹಿಳಾ ಸಾಧಕಿಯರ ಬದುಕೂ ಕಥನ ಗೀತಗಳಾಗಿವೆ.ಮಹಾದೇವಿಯಕ್ಕ ನಡೆದ ದಾರಿಯಿದೆ,ಮತದಾನದ ಅರಿವೂ ಇದೆ.ಗೆಳೆತನದ ಸಾರವೂ ಇದೆ. ಎಷ್ಟೆಲ್ಲ ಪಾಠ ಹೇಳಿದ ' ಕರೋನಾ' ದ ಚಿತ್ರಣವೂ..
ಅಷ್ಟೇ ಏಕೆ ವ್ಯಾಕರಣ,ಸಂಧಿಗಳಂತಹವೂ ಇಲ್ಲಿ ಹಾಡ್ಗತೆಗಳಾಗಿ ಸೆಳೆಯುತ್ತವೆ.
ಮಹಿಳಾಕ್ಷೇತ್ರದ ಕುರಿತು ಅದಮ್ಯವಾಗಿ ತುಡಿಯುವ ಡಾ.ಜಿ.ಸುಧಾ ಅವರ ಜೊತೆ ವಿಜಯಲಕ್ಷ್ಮಿ ಯವರೂ ಸೇರಿ ರಚಿಸಿರುವ ಮಹಿಳಾ ಸಾಧನೆಯ ಇತಿಹಾಸ ಲಾವಣಿ ಅಪರೂಪದ ಮತ್ತು ಅಗತ್ಯ ಮಾಹಿತಿಗಳನ್ನು ಒಳಗೊಂಡಿದೆ.
ಯಾವುದೇ ಪಾಂಡಿತ್ಯ ಹೇರಿಕೊಳ್ಳದ ಈ ಸರಳ ರಚನೆಗಳು ಎಲ್ಲರಿಗೂ ತಲುಪಬಲ್ಲವೆಂಬುದೇ ಇವುಗಳ ಹೆಗ್ಗಳಿಕೆ.ಶಾಲಾ ಕಾಲೇಜು ವಿದ್ಯಾರ್ಥಿಗಳಿಗಳ ಬಳಿ ಇರಲೇಬೇಕಾದ ಕೃತಿಯೂ ಹೌದು.ಹಾಡುವ ಉತ್ಸಾಹದ ಜತೆಗೆ ಅರಿವನ್ನು ಹಿಗ್ಗಿಸುವ ಶಕ್ತಿ ಈ ಲಾವಣಿಗಳಿಗಿದೆ.

About the Author

ಕೊಳ್ಳೇಗಾಲದ ನಿವಾಸಿಯಾಗಿರುವ ವಿಜಯಲಕ್ಷ್ಮಿ ಎಂ. ಎಸ್ ರವರು ಪ್ರೌಢಶಾಲಾ ದಿನಗಳಿಂದಲೂ ಕವನ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದು, ಕಳೆದು 3 ವರ್ಷಗಳಿಂದ ಈ ಪುಟಾಣಿ ಕಥೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಎರಡು-ಮೂರು ವಾಕ್ಯಗಳಲ್ಲಿ ಮುಗಿಯುವ ಈ ಕಥೆಗಳನ್ನು ಬರೆಯಲಾರಂಭಿಸಿದ ಗೆಳತಿ ಜಿ.ಸುಧಾರವರಿಂದ ಪ್ರೇರಿತರಾಗಿ ಬರೆಯಲಾರಂಭಿಸಿದ್ದು, ಇದು ಕನ್ನಡದಲ್ಲಿ ಹೊಸ ಪ್ರಕಾರವಾಗಿದೆ. ತಮ್ಮ ಸುತ್ತಮುತ್ತಲು ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಥೆಗಳನ್ನು ರಚಿಸಿದ್ದಾರೆ. ಗೃಹಿಣಿಯಾಗಿರುವ ಇವರೀಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಮಾಡುತ್ತಿದ್ದಾರೆ. ಜೊತೆಗೆ ಕೊಳ್ಳೇಗಾಲದಲ್ಲಿ ಮುಕ್ತ ಸಾಹಿತ್ಯ ವೇದಿಕೆಯ ಆರಂಭಕರ್ತೆಯರಲ್ಲಿ ಒಬ್ಬರಾಗಿದ್ದಾರೆ. ಓದುವುದು, ಹಾಡುವುದು, ಲೇಖನ, ಕವನ, ಕಥೆ, ಬರೆಯುವುದು ಇವರ ಹವ್ಯಾಸಗಳಾಗಿವೆ.

Book Details

Publisher: Nileena Thomas
Number of Pages: 111
Availability: Available for Download (e-book)

Ratings & Reviews

ಲಾವಣಿ

ಲಾವಣಿ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಲಾವಣಿ.

Other Books in Poetry, Education & Language

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.