You can access the distribution details by navigating to My pre-printed books > Distribution

Add a Review

ಶತಮಾನಂಭವತಿ (eBook)

ಒಂದು ಅನನ್ಯ ಭಾವಾಂಕುರ
Type: e-book
Genre: Poetry
Language: Kannada
Price: ₹50
(Immediate Access on Full Payment)
Available Formats: PDF

Description

ಜಯಹೇ ಕರ್ನಾಟಕ ಮಾತೆ !
ನೂರಾರು ವರ್ಷ
ಹಬ್ಬಲಿ
ಕನ್ನಡ ಕಟ್ಟುವ
ಹಂಬಲ!
ನೆನ್ನೆ ಇಂದುಗಳಲ್ಲಿ
ನೆನ್ನೆ ಚೆನ್ನಿತ್ತೇನೋ !
- ಇಂದೆಂಬ ನಾಳೆ ಚೆನ್ನ
ಇರುಳಲ್ಲೊಮ್ಮೆ
ಬೆಳಕನ್ನು ಮುಟ್ಟಿ!
- ಬೆಳಕಿನೊಳಗಿನ ಇರುಳ ಅಟ್ಟಿ
ಬಿನ್ನಿಗಂಟಿದ ಬೇತಾಳ ಈ ದೇಹ
- ಮೆದುಳಿಗಂಟಿದ ಮೋಹವೈ ಕನ್ನಡ
ಸೋಲಲ್ಲೂ ಗೆಲುವಿಗೆ
ದಾರಿ ತೋರಿಸಿದವರು !
- ಬೆಳಕಿನಾ ಅರಿವಿನ ಮರಿಗಳು
ಹಬ್ಬ ಮನಸಿಗಾಗಿದ್ದರೆ
ಮನೆಯೆಷ್ಟು ಚನ್ನ!
- ಹೊಸರಾಜಕಾರಣಿಗಳು ಬರುತ್ತಿದ್ದಾರೆ ಕಾಯಿ ನೀನಿನ್ನ!
ಅವನೆಂದೂ ವೂಡಿರಲಿಲ್ಲ ಇಂಥ ಅಲಂಕಾರ
ಬದುಕಿದ್ದಾಗ ತನ್ನ ಮುರುಕು ಮನೆಗೆ
- ಕೇಳಿಸಲೀ ಬಡವನ ಈ ಕವನ
ವಿಧಾನಸೌಧದ ಕಿವಿಗೆ
ನುಡಿ ನಡೆ ತಪ್ಪಿದೊಡೆ!
- ನಡೆದು ಬಿಡು ನೀ ಮನ ಬಂದ ಕಡೆ
ತುಂಡನೆರಡು ಒಂದು ಮಾಡುವ
ಗುಂಡು ಸೂಜಿಯ ಮೊನೆಗೆ
ಬಂಧ ಕಳಚಿದ ಭಾವ ನೇಯುವ
ಚೆಂದ ದಾರ ಬೇಕಿದೆ !
- ನಾನೂ ಹುರಿಮಾಡುತ್ತಿರುವೆ
ಶಿಷ್ಯರೆಂಬ ಅರಳೇಕಾಯಿಗಳಾ!
ನಮ್ಮದು ಮಠ ಹಿಡಿದ ಕವಿಗೋಷ್ಠಿ !
- ಕಿತ್ತು ನಮ್ಮ ವೇಷ್ಟಿ
ಹಾರಿದ್ದಾರೆ ಮಕ್ಕಳು ಮೋಟುಗೋಡೆಯಾ
ಒದ್ದೆ ಕಣ್ಣಿನಲ್ಲಿ ಕಾಲ ಕಳೆಯುವ ಸಮಯ !
- ನೀ ಹೇಗಿದ್ದೀಯಾ ಎಂದು ಕೇಳು ಗೆಳೆಯ !
ಪ್ರಿಯ ಓದುಗರೇ,
ಅನು ಎಸ್. ಗೌಡ ಬರೆದ ಕವಿತೆ ಹೋಗಿ ಬಾ ಗೆಳಯ ಓದಿ ನೋಡಿ. ಅದರಲ್ಲಿ ಗೆಳತಿಯೋರ್ವಳು ಗೆಳೆಯನನ್ನು ಬೀಳ್ಕೊಡುವ ಸಮಯ ಮತ್ತು ನಂತರದ ಅವರ ಸ್ನೇಹದೊಳಗಿನ ಶೂನ್ಯವನ್ನು ಚಿಂತಿಸುತ್ತಾ ಹೆದರುತ್ತಾಳೆ. 'ಗುಂಡಗಿರುವ, ತಿರುಗುವ ಈ ಭೂಮಿಯಲ್ಲಿದ್ದರೂ ಭೇಟಿಯಾಗದ ಭಯ, ಮತ್ತು ಭೇಟಿಯಾದಾಗ' ನೀನು ಯಾರೆಂದು? ಕೇಳಿಬಿಡಬಹುದಾದ ಆಘಾತವನ್ನು ಅನುವಾದಿಸಿದ್ದಾಳೆ. ಅಂದರೆ ಆಘಾತವನ್ನೂ ಅನುಭವಗೊಳಿಸಿದ್ದಾಳೆ ಎಂದರ್ಥ!
ಹೊರದೇಶದಲ್ಲಿರುವ, ಮಾಹಿತಿ ಜಾಲಗಳಲ್ಲಿ ವ್ಯವಹರಿಸುವ, ಇಂಗ್ಲೀಷನ್ನ ವ್ಯಾಪಾರದ ಮಾಧ್ಯಮವನ್ನಾಗಿಸಿಕೊಂಡಿರುವ ಕನ್ನಡಿಗರು - ತಾವು ವಾಸಿಸುವ ಪರಿಸರದಲ್ಲಿ 'ಕನ್ನಡ' ಕೇಳಿಬಂದಾಗ - 'ನೀನಾರು?' ಎನ್ನಬಾರದು! ಅದೇ ಈ ಶತಮಾನಂಭವತಿ ಕವನಸಂಕಲನದ ಆಶಯ. ಅಪ್ಪಟ ಕನ್ನಡಿಗರ ಗುಂಪು ಈ 3K ಬಳಗ. ನನ್ನ ಪ್ರಿಯ ಮಿತ್ರ ಸುಬ್ಬು ಪರಿಚಯಿಸಿದ ಈ ಬಳಗದ ಮಾತಿಗೆ ಮನ್ನಣೆ ಕೊಟ್ಟಿದ್ದು ಸುಬ್ಬು ಮತ್ತು ನನ್ನ ನಡುವೆ ಬದುಕಿರುವ ಕನ್ನಡದ ಬಾಂಧವ್ಯದ ಏಕೈಕ ಕಾರಣದಿಂದ.
ಸರಿ ಸುಮಾರು ಒಂದು ತಿಂಗಳಿಂದ ಕುಳಿತು ಈ ನೂರು ಪದ್ಯಗಳನ್ನು ಓದಲು ಸಮಯವಿಲ್ಲದೆ, ಈ (ಎಪ್ರಿಲ್ ೩೦) ರಾತ್ರಿ ೧ ಗಂಟೆಗೆ ಓದಿ ಮುಗಿಸಲು ಕಾರಣ ಇತ್ತೀಚಿನ ದಿನಗಳಲ್ಲಿ ತಾರಾ ಪಟ್ಟ ದಕ್ಕಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಹೀರೋನ ಕನ್ನಡ ಹೀನತನದ ನಡೆತೆಯ ದೆಸೆಯಿಂದ. ನಿದ್ದೆ ಬಂದಿರಲಿಲ್ಲ. ಕನ್ನಡವನ್ನು ಕನಸು ಮನಸಿನಲ್ಲೂ ಪ್ರೀತಿಸುವ ಈ ಕವಿತೆಗಳ ಕವಿಗಳ ಪ್ರೀತಿಯನ್ನು ಓದದೆ ಸತಾಯಿಸಿದ್ದು ನೆನಪಾಗಿ, ಪಶ್ಚಾತ್ತಾಪದಿಂದ ಮನ್ನಿಸಿರೆಂದು ಓದಿದ್ದೇನೆ.
ಆಕೆ ಕವಯತ್ರಿ ರೂಪ ಸತೀಶ್. ಆಕೆಯೊಡನೆ ಹೇಳಿದ್ದೆ. ಮುನ್ನುಡಿಯಾಗಿ ನಾನೂ ಒಂದು ಪದ್ಯವನ್ನು ಬರೆದು ಕೊಡಲೆ ಎಂದು. ಆಕೆ ಸಂತಸದಿಂದ ಒಪ್ಪಿದ್ದರು. ಆ ಮುನ್ನುಡಿಯ ಪದ್ಯ ಬರೆಯಲು ಕುಳಿತಾಗ, ಈ ಪುಸ್ತಕದ ಪ್ರತಿ ಕವನದಲ್ಲಿರುವ ಒಳ್ಳೆಯ ಸಾಲು ತೆಗೆದುಕೊಂಡು. ಅದಕ್ಕೊಂದು ಉತ್ತರ ರೂಪದ ಸಾಲನ್ನು ಬರೆಯೋಣ ಎಂದುಕೊಂಡು ಆರಂಭಿಸಿದೆ. ಹತ್ತನೆಯ ಸಾಲಿಗೆ ಉತ್ತರ ಬರೆದಾಗ ಅದೇ ಈ ಪುಸ್ತಕದ ಆಶಯವಾಗಲೆಂದು ಅನ್ನಿಸಿ ಅಲ್ಲಿಗೆ ನಿಲ್ಲಿಸಿದೆ. ಕನ್ನಡವನ್ನು ಕಟ್ಟುವ, ಅದು ಕಳೆದು ಹೋಗುವ ಆತಂಕವನ್ನು ನೀಗಿಸುವ, ಹಾಗೂ ಅಂತರ್ಜಾಲದಲ್ಲಿ ಕನ್ನಡವನ್ನು ವಿಶ್ವಪಾಠವಾಗಿಸುವ ಇಂತಹ ಬಳಗದ ಪ್ರಯತ್ನವೇ ಕನ್ನಡಭಾಷಾ ಸಂಗ್ರಾಮದ ಮುಂಚೂಣಿ. ಇದರಲ್ಲಿ ನನ್ನ ಮಾತೂ ಇದೆ ಮನಸು ಪ್ರಾಣ ಜೊತೆಯಲ್ಲೇ ಇರುತ್ತದೆ.
ನಮ್ಮನ್ನು ಕನ್ನಡಿಗರೆಂದು ಆಶೀರ್ವದಿಸಿದ ಕನ್ನಡ ಭಾಷೆಗೇ ಇಂದು ರಕ್ಷಣೆಯ ಆಶೀರ್ವಚನ ನೀಡಬೇಕಾದ ಪರಿಸ್ಥಿತಿಯನ್ನು ನಾವು ಆಯ್ಕೆಗೊಳಿಸಿದ ಪ್ರಜಾಪ್ರತಿನಿಧಿಗಳು ಸೃಷ್ಟಿಸಿದ್ದಾರೆ. 'ಕನ್ನಡ' ಭಾಷೆಯ ಈ ಅತಂತ್ರ ಸ್ಥಿತಿಗೆ ಸಾಮಾನ್ಯ ಜನರು ಸಹ ಕಾರಣರಲ್ಲವೇ ಎಂದು ಪ್ರಶ್ನಿಸಿದರೆ, ಖಂಡಿತ ಇಲ್ಲ ಎನ್ನುತ್ತೇನೆ. ಸಾಮಾನ್ಯ ಜನರು ತಮ್ಮ ಬದುಕಿಗೆ ಎದುರಾದ ಎಲ್ಲ ಪರಭಾಷೆಗಳನ್ನೂ, ಅದರ ಚಲಾಯಿತ ಪದಗಳನ್ನೂ ರೂಪಾಂತರಗೊಳಿಸಿಕೊಂಡು ಕನ್ನಡಕ್ಕೆ ಸೇರಿಸಿಕೊಂಡು ಮುಂದುವರೆಯುತ್ತಾರೆ. ಕನ್ನಡ ಪ್ರಾಧಿಕಾರ, ಸಾಹಿತ್ಯ ಪರಿಷತ್ತುಗಳು - ಈ 'ಬೆಳೆವ ಕನ್ನಡ'ವನ್ನು ಮಾನ್ಯತೆ ಗೊಳಿಸುತ್ತಾ ರಾಷ್ಟ್ರದಿಂದ ಹಕ್ಕುಗಳನ್ನು ಪಡೆಯಲು ಶಕ್ತವಾಗಿರುವ ಕನ್ನಡವನ್ನು ಕಾಯುವ, ಕಟ್ಟುವ ಕಾಯಕವನ್ನು ನಿರಂತರವಾಗಿ ಮಾಡಬೇಕು.
ನಾನೊಂದು ಕನ್ನಡದ ಕೈಂಕರ್ಯವನ್ನು ಕೈಗೆತ್ತಿಕೊಂಡಿದ್ದೇನೆ. ಚಲನಚಿತ್ರಕ್ಕೆ ನೂರುವರ್ಷಗಳು ತುಂಬಿದ ಸಂಭ್ರಮದಲ್ಲಿ ನಾವೆಲ್ಲಾ ಇದ್ದೇವೆ. ಇದರ ನೆನಪಿಗಾಗಿ - ಕನ್ನಡ ಭಾಷೆಯು 'ನಾಡಗೀತೆ' ಎಂಬ ಚಿತ್ರವನ್ನು ನಿರ್ಮಿಸಿತು ಎಂದು ಇತಿಹಾಸದಲ್ಲಿ ದಾಖಲಾಗಬೇಕು. ಆ ಹಂಬಲದಿಂದ ನಾನು, ನನ್ನ ಬಳಗ ಸೇರಿ ನಾಡಗೀತೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದೇವೆ. ಈ 3K ಬಳಗದಂತವರ ನೆರವಿನಿಂದಲೇ ನಾಡಗೀತೆ ಲೋಕಾರ್ಪಣೆಯಾಗುತ್ತದೆ. ಅನಕೃ, ರಾಜ್‌ಕುಮಾರ್, ಕುವೆಂಪು ಇತ್ಯಾದಿ ಮಹಾಮಹನೀಯರ ಪತಿವ್ರತಾ ನಿಷ್ಠೆಯು ಕನ್ನಡಕಿಲ್ಲದಿದ್ದರೇ ಈ ಕಾಲದಲ್ಲಿ ಕನ್ನಡವು ವಿಶ್ವಭಾಷೆಯಾಗುತ್ತಿತ್ತೇ ! 3K ಬಳಗದ ಈ ಕನ್ನಡ ಸೇವೆಯು ಅವರ ನಿಷ್ಠೆಯನ್ನು ಸಾಭೀತು ಪಡಿಸುತ್ತಿದೆ.
ಬರಲಿ...! ಎಲ್ಲಕಡೆಯಿಂದ ಬೆಳಕು! ಕನ್ನಡಕ್ಕೆ!
ಜಯ ಭಾರತ ಜನನಿಯ ತನುಜಾತೆ.
ಜಯಹೇ ಕರ್ನಾಟಕ ಮಾತೆ !
-ಹಂಸಲೇಖ

ಸಂಚಾಲಕರ ಮಾತು
"ಭಾವಸಿಂಚನ", 3K ಸಮುದಾಯದ ಅಪಾರ ಮೆಚ್ಚುಗೆ, ಪ್ರಶಂಸೆಗೊಳಗಾದ ಮೊದಲ ಕವನ ಸಂಕಲನ. ಈ ಯಶಸ್ಸಿನ ಫಲಿತಾಂಶವೇ "ಶತಮಾನಂಭವತಿ", ನೂರು ಕವಿಗಳ-ನೂರು ಮನಸುಗಳ ಒ೦ದು ಅನನ್ಯ ಭಾವಾ೦ಕುರ.
ಇಲ್ಲಿ ಈಗಷ್ಟೇ ಬರೆಯಲು ಮೊದಲಿಟ್ಟ ಯುವ ಕಬ್ಬಿಗರ ತುಡಿತಗಳಿವೆ, ಹಿರಿಯರ ಅನುಭವಗಳು, ದೇಶದ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರ ಭಾವನೆಗಳು ಒ೦ದುಗೊಡಿವೆ. ಅಷ್ಟೇ ಅಲ್ಲ, ಅಮೇರಿಕ, ಆಸ್ಟ್ರೇಲಿಯ, ಸೌದಿ ಅರೇಬಿಯ ಹಾಗು ಇತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಒ೦ದು ಸು೦ದರ ಆವರಣವಾಗಿದೆ.
3K ಸಮುದಾಯವನ್ನು ಒಮ್ಮೆ ಅವಲೋಕಿಸಿದರೆ ಅಲ್ಲಿ ಕಾಣಸಿಗುವುದು ಅನೇಕ ಮೊದಲ ಬಾರಿಗೆ/ಆಗಷ್ಟೇ/ಹವ್ಯಾಸಕ್ಕೆಂದೇ ಬರೆಯುವ ಕವಿಗಳು. ಇಲ್ಲಿ ಎಲ್ಲರಿಗೂ ಮನ್ನಣೆ ಹಾಗು ಪ್ರೋತ್ಸಾಹ. "ಕನ್ನಡವನ್ನು ಬೆಳೆಸಬೇಕು" ಎನ್ನುವ ನಮ್ಮ ಆಶಯವೇ ಇದಕ್ಕೆ ಮೂಲಕಾರಣ. ಹಾಗಾಗಿಯೇ 3K ಎಲ್ಲರಿಗೂ ಅಚ್ಚುಮೆಚ್ಚು.
ನಮ್ಮೆಲ್ಲರ "ಶತಮಾನಂಭವತಿ" ಕನ್ನಡಮ್ಮನ ಸೇವೆಯಾಗಿದೆ. ಇದು ನಿರಂತರ....
ರೂಪ ಸತೀಶ್

About the Authors

3K ಬಳಗದ ನೂರು ಕವಿಗಳು
3K -ಕನ್ನಡ ಕವಿತೆ ಕಥನ", ಇದು ಆರ್ಕುಟ್ ಹಾಗು ಫೇಸ್ಬುಕ್ ಎಂಬ ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಿರುವ ಜನಪ್ರಿಯ ಸಮುದಾಯ. ಸುಮಾರು ೮೦೦ಕ್ಕೂ ಹೆಚ್ಚು ಸದಸ್ಯರು ಹಾಗು ೨೮೦೦ಕ್ಕೂ ಹೆಚ್ಚು ಕನ್ನಡ ಕವನಗಳನ್ನು ಹೊಂದಿರುವ ಹೆಗ್ಗಳಿಕೆ 3K ಯದ್ದು.

ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಿ: https://www.facebook.com/groups/kannada3K/

Book Details

Publisher: 3K ಕನ್ನಡ ಕವಿತೆ ಕಥನ ತಂಡ
Number of Pages: 141
Availability: Available for Download (e-book)

Ratings & Reviews

ಶತಮಾನಂಭವತಿ

ಶತಮಾನಂಭವತಿ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಶತಮಾನಂಭವತಿ.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.