You can access the distribution details by navigating to My pre-printed books > Distribution
ಉಷಾಕಿರಣದ ಬಗ್ಗೆ
ಈ ಕಥಾಸಂಕಲನದಲ್ಲಿ ಒಟ್ಟು 13 ಕಥೆಗಳಿವೆ. ನಿಜವಾದ ಘಟನೆಗಳಿಂದ ಪ್ರೇರಿತವಾಗಿ ಅದಕ್ಕೆ ತಮ್ಮದೇ ಆದ ಕಥಾ ಚೌಕಟ್ಟನ್ನು ಲೇಖಕಿ ಒದಗಿಸಿದ್ದಾರೆ. ಭಾಷೆ ಬಹಳ ಸರಳವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಕಥೆ ಹೇಳುವ ವಿಧಾನ ಓದುಗರಲ್ಲಿ ಕೊನೆಯವರೆಗೂ ಆಸಕ್ತಿಯನ್ನು ಮೂಡಿಸುತ್ತದೆ. ಓದುಗರನ್ನು ಕಥೆಯಲ್ಲಿ ತಲ್ಲೀನರಾಗುವಂತೆ ಮಾಡುವ ಅವರ ಕಲೆ ಮೆಚ್ಚತಕ್ಕದ್ದೆ.ಎಲ್ಲ ಕಥೆಗಳೂ ಸಮಸ್ಯೆಗಳನ್ನು ಮಾತ್ರ ಹೇಳದೆ, ಅವಕ್ಕೆ ಪರಿಹಾರವನ್ನೂ ತೋರಿಸುತ್ತವೆ. ವ್ಯವಸ್ಥೆಯ ಒಳಗಿನ ಅವ್ಯವಸ್ಥೆಯ ಚಿತ್ರ ಬಿಡಿಸುತ್ತಾ ಎಲ್ಲಿ ಬದಲಾಗಬೇಕಿದೆ ಎನ್ನುವುದನ್ನೂ ತಿಳಿಸುತ್ತವೆ. ಕಥೆಗಾರ್ತಿಯ ಸಮಾಜ ಚಿಕಿತ್ಸಕ ಮನೋಧರ್ಮವೇ ಈ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. ಸ್ತ್ರೀವಾದಿ ಚಿಂತನೆಯ ಲೇಖಕಿ ಸ್ತ್ರೀಯರ ಬದುಕು ಸುಧಾರಿಸಬೇಕಾದ ಸೂಚನೆಗಳನ್ನು ಕೊಡುತ್ತಲೇ ಕಥಾ ಹಂದರವನ್ನು ವಿಸ್ತರಿಸಿದ್ದಾರೆ. ಇಲ್ಲಿನ ಸ್ತ್ರೀ ಪಾತ್ರಗಳೂ ಬೆಡಗು ಬಿನ್ನಾಣಗಳಿಲ್ಲದ ಸರಳತೆಯ ಹಾದಿ ಹಿಡಿದವರು, ಅರಿವಿನ ಬೆಳಕಿಗೆ ತಮ್ಮನ್ನು ಒಡ್ಡಿಕೊಂಡವರು, ಬದುಕಿನ ಬವಣೆಗಳನ್ನು ನೀಗಿ ಪಯಣ ಮುಂದುವರೆಸಲು ಬಯಸಿದವರು. ಲೇಖಕಿಯ ಆಶಯಗಳೆಲ್ಲಾ ಪಾತ್ರಗಳಾಗಿ ವ್ಯಕ್ತಿತ್ವವನ್ನು ವಿಕಸಿಸಿಕೊಂಡಿವೆ. ಒಟ್ಟಾರೆಯಾಗಿ, ಎಲ್ಲಾ ಕಥೆಗಳೂ ಸಹ ಬದುಕಿನ ಬಗ್ಗೆ ಬೆಳಕಿನ ಹೊನಲನ್ನು ಹರಿಸುವ ಪ್ರಯತ್ನವಾಗಿರುವುದರಿಂದ, ಪುಸ್ತಕಕ್ಕೆ ಇಟ್ಟ ಶೀರ್ಷಿಕೆ "ಉಷಾಕಿರಣ" ಸೂಕ್ತವಾಗಿದೆ
Currently there are no reviews available for this book.
Be the first one to write a review for the book ಉಷಾಕಿರಣ.