You can access the distribution details by navigating to My pre-printed books > Distribution
ಇದು ಸೋವಿಯತ್ ರಷ್ಯಾದ ಶಿಕ್ಷಣತಜ್ಞರಾದ ಆಂಟನ್ ಮಕರೆಂಕೊರವರ ಸ್ವಾನುಭವದ ಆಧಾರದ ಮೇಲೆ ಬರೆದ ಶಿಕ್ಷಣಗಾಥೆ. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ, ನಂತರ ಜ಼ಾರ್ ದೊರೆಯ ಆಳ್ವಿಕೆಯಲ್ಲಿ ಸಮಾಜವಾದಿ ಹೋರಾಟವನ್ನು ಹತ್ತಿಕ್ಕುವ ಸಂದರ್ಭದಲ್ಲಿ, ಸಾವಿರಾರು ಜನರನ್ನು ಕೊಲ್ಲಲಾಯಿತು. ಹಾಗೆ, ಪೋಷಕರಿಲ್ಲದೆ ಅನಾಥರಾದ ಸಾವಿರಾರು ಮಕ್ಕಳು ಭಿಕ್ಷೆ ಬೇಡಿಯೊ, ಕಳ್ಳತನ ಮಾಡಿಯೊ ಬದುಕುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಈ ಕೆಲಸಗಳ ಜೊತೆಗೆ ವೇಶ್ಯೆಯರಾದರು.
ಸೋವಿಯತ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ, ಇಂತಹ ಬೀದಿಗೆ ಬಿದ್ದ, ಬಾಲಾಪರಾಧಿಗಳಾದ ಮಕ್ಕಳನ್ನು ತಿದ್ದಲು ನಿಶ್ಚಯಿಸಿತು. ಹಳೆಯ ಜಡ್ಡುಗಟ್ಟಿದ ಶೈಕ್ಷಣಿಕ ವಿಧಾನಗಳನ್ನು ಬಳಸದೆ 'ಹೊಸ ಮನುಷ್ಯ'ರನ್ನು ಸೃಷ್ಟಿಸಲು ಹೊಸ ವಿಧಾನಗಳ ಅನ್ವೇಷಣೆ ಮಾಡಲಾಯಿತು. ಆ ಪ್ರಯತ್ನದಲ್ಲಿ ಅಸ್ತಿತ್ವಕ್ಕೆ ಬಂದವುಗಳೇ ಈ ಮಕ್ಕಳ ಗೃಹಗಳು.
ಅಂತಹ ಒಂದು ಗೃಹದ ಮುಖ್ಯಸ್ಥರಾಗಿ ಬಂದ ಆಂಟನ್ ಮಕರೆಂಕೊರವರು, ತಮ್ಮ ಅನುಭವದ ಮತ್ತು ಅಧ್ಯಯನದ ಮೂಲಕ ಹೊಸ ವಿಧಾನಗಳನ್ನು ರೂಪಿಸಿದರು. ಆ ಅನುಭವಗಳನ್ನೇ ಅವರು ಈ ಪುಸ್ತಕದಲ್ಲಿ ರೂಪಿಸಿದ್ದಾರೆ.
ಅವರು ಬಳಸಿಕೊಂಡ ವಿಧಾನಗಳು, ಎದುರಿಸಿದ ಅಡ್ಡಿ ಆತಂಕಗಳು, ಪಡೆದ ಅನುಭವಗಳು, ಕಲಿತ ಪಾಠಗಳು ಅವರನ್ನು ವಿಶ್ವವಿಖ್ಯಾತ ಶಿಕ್ಷಣತಜ್ಞರನ್ನಾಗಿಸಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಪುಸ್ತಕ ಹೊಸ ಅಲೆಯನ್ನು ಎಬ್ಬಿಸಿತು. ಅವರ ಈ ವಿಧಾನಗಳನ್ನು ವಿಶ್ವದ ಬಹಳಷ್ಟು ದೇಶಗಳು ಅಳವಡಿಸಿಕೊಂಡಿವೆ. ಶಿಕ್ಷಣದ ಬಗ್ಗೆ ಆಸಕ್ತಿಯಿರುವ ಎಲ್ಲರೂ, ತಮ್ಮ ವೃತ್ತಿಯನ್ನು ಪ್ರೀತಿಸುವ ಎಲ್ಲಾ ಶಿಕ್ಷಕರೂ, ತಪ್ಪದೆ ಓದಲೇಬೇಕಾದ ಪುಸ್ತಕವಿದು.
Currently there are no reviews available for this book.
Be the first one to write a review for the book ಬದುಕಿನ ಹಾದಿ (ಭಾಗ - ೧).