You can access the distribution details by navigating to My pre-printed books > Distribution

Add a Review

ಶಹೀದ್ ಭಗತ್ ಸಿಂಗ್ (eBook)

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ
Type: e-book
Genre: Biographies & Memoirs
Language: Kannada
Price: ₹30
(Immediate Access on Full Payment)
Available Formats: PDF

Description

1947 ರ ಆಗಸ್ಟ್ 14ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು, ಅಲ್ಲಿಯವರೆಗೂ ಇಲ್ಲಿ ದಬ್ಬಾಳಿಕೆ ನಡೆಸಿದ್ದ ಬ್ರಿಟಿಷರು ಈ ದೇಶ ಬಿಟ್ಟು ಹೋದರು. ಬಹಳಷ್ಟು ಪುಸ್ತಕಗಳಲ್ಲಿ ಬರೆದಿರುವಂತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಕೇವಲ ಅಹಿಂಸೆ ಮತ್ತು ಸತ್ಯಾಗ್ರಹದಿಂದಲ್ಲ. ಈ ದೇಶದ ವಿಮೋಚನೆಗಾಗಿ ಲಕ್ಷಾಂತರ ಜನ ತನುಮನಧನ ಅರ್ಪಿಸಿದ್ದಾರೆ. ಬ್ರಿಟಿಷರಿಂದ ಅಪಮಾನಗೊಂಡಿದ್ದಾರೆ, ಅಮಾನವೀಯ ಹಾಗೂ ಬರ್ಬರ ಹಿಂಸೆ ಅನುಭವಿಸಿದ್ದಾರೆ. ಹತ್ತಾರು ವರ್ಷಗಳ ಕಾಲ ಜೈಲಿನಲ್ಲಿದ್ದು, ಗಡಿಪಾರು ಶಿಕ್ಷೆ ಅನುಭವಿಸಿದ್ದಾರೆ. ಪೋಲಿಸರ ಗುಂಡಿಗೆ ಬಲಿಯಾಗಿದ್ದಾರೆ, ನಗುನಗುತ್ತಾ ಗಲ್ಗಂಬಕ್ಕೆ ಮುತ್ತಿಟ್ಟು, ನೇಣಿನ ಕುಣಿಕೆಗೆ ತಮ್ಮ ತಲೆಗಳನ್ನೊಡ್ಡಿದ್ದಾರೆ. ಸ್ತ್ರೀಯರೂ ಸಹ ಪೋಲಿಸರ ಅತ್ಯಾಚಾರ, ಅವಮಾನ, ಕಾರಾಗೃಹ ಶಿಕ್ಷೆ ಎಲ್ಲವನ್ನೂ ಎದುರಿಸಿದ್ದಾರೆ. ಸ್ವಾತಂತ್ರ್ಯ ನಮಗೆ ದೊರೆತಿರುವುದು ತಮ್ಮ ಮುಂದಿನ ಪೀಳಿಗೆಯವರು ಸ್ವತಂತ್ರರಾಗಿ, ಸುಖವಾಗಿ ಬಾಳಲೆಂದು ಬಯಸಿದ ಇಂತಹ ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ. 

ಅಂತಹ ಅಸಂಖ್ಯಾತ ಯೋಧರಲ್ಲಿ, ಕೇವಲ ತಮ್ಮ 24 ನೇ ವಯಸ್ಸಿಗೆ ಗಲ್ಗಂಬವನ್ನು ಏರಿದ ಭಗತ್‌ಸಿಂಗ್ ಅಸಾಮಾನ್ಯ ಕ್ರಾಂತಿಕಾರಿಗಳು. ಅವರು ಈ ದೇಶ ಮಾತ್ರವಲ್ಲ, ಇಡೀ ಜಗತ್ತು ಕಂಡ ಅಪ್ರತಿಮ ಕ್ರಾಂತಿಕಾರಿಗಳಲ್ಲೊಬ್ಬರು. ಅವರು ತಮ್ಮ ತ್ಯಾಗ ಮತ್ತು ಬಲಿದಾನದಿಂದಾಗಿ, ಅದಕ್ಕೂ ಮಿಗಿಲಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡ ಉನ್ನತ ವೈಚಾರಿಕ ಮಟ್ಟದಿಂದಾಗಿ, ಸಂಘಟನೆಯನ್ನು ಕಟ್ಟಿದ ರೀತಿಯಿಂದಾಗಿ, ಜನತೆಯಲ್ಲಿ ಹೋರಾಟದ ಉತ್ಸಾಹವನ್ನು ತುಂಬಿದ ರೀತಿಯಿಂದಾಗಿ, ಕ್ರಾಂತಿಕಾರಿಗಳು ಭಯೋತ್ಪಾದಕರಲ್ಲ, ಬದಲಿಗೆ ಅಸೀಮ ದೇಶಪ್ರೇಮಿಗಳೆಂದು ಜಗತ್ತಿಗೆ ಸಾರಿದ ಅವರ ವೈಖರಿಯಿಂದಾಗಿ, ಅವರು ನಮ್ಮ ನಡುವೆ ಇಲ್ಲದಿದ್ದರೂ, ಸದಾ ಕಾಲ ಧೃವತಾರೆಯಾಗಿ ಮಿನುಗುತ್ತಿರುತ್ತಾರೆ. ನಮ್ಮ ಜಡತೆಯನ್ನು ಹೊಡೆದೋಡಿಸಿ ನಮ್ಮಲ್ಲಿ ನಿರಂತರ ಚೈತನ್ಯವನ್ನು ತುಂಬುವ ಸ್ಫೂರ್ತಿಯ ಸೆಲೆಯಾಗಿ ನಿಲ್ಲುತ್ತಾರೆ.

ಈ ಪುಸ್ತಕ ಅವರ ಜೀವನ ಮತ್ತು ಹೋರಾಟದ ಸಂಕ್ಷಿಪ್ತ ಚಿತ್ರಣವಾಗಿದೆ. ಎಲ್ಲಾ ವಯಸ್ಸಿನವರೂ ಓದಬಹುದಾದಂತಹ ರೀತಿಯಲ್ಲಿ ಈ ಪುಸ್ತಕವನ್ನು ಆಕರ್ಷಕವಾಗಿ ಬರೆಯಲಾಗಿದೆ. ಘಟನೆಗಳ ಮೂಲಕ ಅವರ ಬದುಕಿನ, ವಿಚಾರಗಳ ಚಿತ್ರವನ್ನು ಕಟ್ಟಿಕೊಡಲಾಗಿದೆ.

About the Author

ಅನುವಾದಕಿಯ ಕಿರುಪರಿಚಯ

ಸುಧಾ ಜಿ - ಇವರು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ನಾಟಕ, ಲೇಖನ ಬರೆಯುವುದು ಇವರ ಹವ್ಯಾಸ. ಇವರ ೨-೩ ಸಾಲುಗಳಲ್ಲಿ ಬರೆಯುವಂತಹ ಪುಟ್ಕಥೆಗಳು, ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಕಾರವಾಗಿದೆ ಇವರು ಸಾಕಷ್ಟು ಕಥೆಗಳನ್ನು, ಲೇಖನಗಳನ್ನು, ಇಂಗ್ಲಿಷ್, ತೆಲುಗು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಾಡು, ಪ್ರವಾಸ, ಚಾರಣ, ಓದುವುದು ಇವರ ಹವ್ಯಾಸಗಳಾಗಿದ್ದು, ಸ್ತ್ರೀವಾದಿ ಚಳುವಳಿಯಲ್ಲಿ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ಹೋದಲೆಲ್ಲಾ ಸಾಹಿತ್ಯ ವೇದಿಕೆ, ಮಹಿಳಾ ಸಂಘಗಳನ್ನು ಕಟ್ಟುವುದು ಇವರಿಗೆ ಪ್ರಿಯವಾದ ಕೆಲಸವಾಗಿದೆ.

Book Details

Publisher: Nileena Thomas
Number of Pages: 162
Availability: Available for Download (e-book)

Ratings & Reviews

ಶಹೀದ್ ಭಗತ್ ಸಿಂಗ್

ಶಹೀದ್ ಭಗತ್ ಸಿಂಗ್

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಶಹೀದ್ ಭಗತ್ ಸಿಂಗ್.

Other Books in Biographies & Memoirs

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.