You can access the distribution details by navigating to My Print Books(POD) > Distribution
ವಿಶಿಷ್ಟಾದ್ವೈತ ಪರಂಪರೆಯಲ್ಲಿ ಶ್ರೀರಾಮಾನುಜಾಚಾರ್ಯರ ಬಳಿಕ ಪ್ರಾಯಃ ಅಷ್ಟೇ ಗೌರವದಿಂದ ಕಾಣಲ್ಪಡುವ ಮತ್ತೊಂದು ಹೆಸರು ‘ಕವಿತಾರ್ಕಿಕಕೇಸರಿ’ ಎಂದು ಬಿರುದಾಂಕಿತರಾದ ಶ್ರೀ ವೇದಾಂತದೇಶಿಕರದು. ವಿಶಿಷ್ಟಾದ್ವೈತ ಸಿದ್ಧಾಂತದ ಬುನಾದಿಯು ಇವರ ತರ್ಕಕರ್ಕಶವಾದ ಪಾಂಡಿತ್ಯದಿಂದಲೂ ಹಾಗೂ ಪ್ರಪತ್ತಿಪಾರಮ್ಯವನ್ನುಳ್ಳ ಸ್ತೋತ್ರಕಾವ್ಯಗಳಿಂದಲೂ ಮತ್ತಷ್ಟು ಸುಭದ್ರ-ವಾಯಿತು. ಪ್ರಸ್ತುತ ಕೃತಿಯು ಇವರಿಂದ ರಚಿತವಾದ ‘ಗೋದಾಸ್ತುತಿ’ಯ ಕನ್ನಡದ ಪದ್ಯಾವತರಣಿಕೆಯಾಗಿದೆ. ದೇಶಿಕರ ಗೋದಾಸ್ತುತಿಯು ಕೇವಲ ನೀರಸವಿಶೇಷಣಗಳ ಸಂತೆಯಾಗಿರದೆ, ಉನ್ನತಕಾವ್ಯಲಕ್ಷಣಗಳಿಂದ ಪರಿ-ಪುಷ್ಟವಾಗಿದೆ. ಸಂಸ್ಕೃತದ ಮೂಲಕೃತಿಯ ಮುಕ್ತಕಗಳು ವಸಂತತಿಲಕಾ/ಮಾಲಿನೀ ಛಂದಸ್ಸುಗಳಲ್ಲಿ ರಚಿತವಾಗಿದ್ದರೆ ಪ್ರಸ್ತುತಕೃತಿಯಲ್ಲಿ ಅವುಗಳನ್ನು ಕನ್ನಡದ ಭಾಮಿನೀ ಷಟ್ಪದಿಯ ಛಂದಸ್ಸಿಗೆ ಅಳವಡಿಸಿ ನಡುಗನ್ನಡದ ತಿಳಿನುಡಿಯಲ್ಲಿ ಪ್ರತಿಯೊಂದು ಮುಕ್ತಕದ ಭಾವಾನುವಾದವನ್ನು ಮಾಡಲಾಗಿದೆ.
Currently there are no reviews available for this book.
Be the first one to write a review for the book ಶ್ರೀಕರ್ಣಾಟಗೋದಾಸ್ತವ.